ಬೆಳಗಾವಿಯಲ್ಲಿ ರೈತ ದಿನಾಚರಣೆ
ರೈತ ಸಂಘ ಹಾಗೂ ಹಸಿರು ಸೇನೆಯ ಸಹಯೋಗ
ಜೈ ಜವಾನ್…ಜೈ ಕಿಸಾನ್
ಬೆಳಗಾವಿಯಲ್ಲಿ ರೈತರಿಂದ ಸಂಭ್ರಮಾಚರಣೆ
ಬೆಳಗಾವಿಯಲ್ಲಿ ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತ ದಿನಾಚರಣೆಯನ್ನು ಆಚರಿಸಲಾಯಿತು.
ಇಂದು ಬೆಳಗಾವಿ ನಗರದ ಪ್ರವೇಶದ್ವಾರದಲ್ಲಿರುವ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತ ದಿನಾಚರಣೆಯನ್ನು ಆಚರಿಸಲಾಯಿತು. ರೈತಪರ ಘೋಷಣೆಗಳನ್ನು ಕೂಗಿ ರೈತರು ಸಂಭ್ರಮಾಚರಣೆಯನ್ನು ಮಾಡಿದರು.
ಈ ವೇಳೆ ರೈತ ಸಂಘದ ಉಪಾಧ್ಯಕ್ಷರಾದ ಸುರೇಶ್ ಪರಗನ್ನವರ್ ಜಾವೇದ್ ಮುಲ್ಲಾ, ಸೇರಿದಂತೆ ಇನ್ನುಳಿದ ರೈತರು ಭಾಗಿಯಾಗಿದ್ಧರು