ಡಿ. 24 ರ ಮಧ್ಯರಾತ್ರಿಯಿಂದಲೇ ಕ್ರಿಸಮಸ್…
ವಿಶ್ವ ಶಾಂತಿಗಾಗಿ ನಡೆಯಲಿದೆ ಪ್ರಾರ್ಥನೆ- ಕ್ರೈಸ್ತ ಧರ್ಮಗುರು ಡೇರಿಕ್ ಫರ್ನಾಂಡಿಸ್ಡಿ. 24 ರ ಮಧ್ಯರಾತ್ರಿಯಿಂದಲೇ ಕ್ರಿಸಮಸ್…
ವಿಶ್ವ ಶಾಂತಿಗಾಗಿ ನಡೆಯಲಿದೆ ಪ್ರಾರ್ಥನೆ
ಸಂತೋಷ, ಪ್ರೀತಿ ಶಾಂತಿಯ ಪ್ರತೀಕ ಕ್ರಿಸಮಸ್
ಕ್ರೈಸ್ತ ಧರ್ಮಗುರು ಡೇರಿಕ್ ಫರ್ನಾಂಡಿಸ್ ಮಾಹಿತಿ
ಸಂತೋಷ, ಪ್ರೀತಿ, ಶಾಂತಿ ಮತ್ತು ಆಧ್ಯಾತ್ಮಿಕ ನವೀಕರಣದ ಋತುವಾದ ಯೇಸುಕ್ರಿಸ್ತನ ಜನ್ಮದಿನವಾದ ಕ್ರಿಸ್‌ಮಸ ಆಚರಣೆ ಡಿಸೆಂಬರ್ 24 ರ ಮಧ್ಯರಾತ್ರಿಯಿಂದ ಆರಂಭಗೊಳ್ಳಲಿದೆ ಎಂದು ಕ್ರೈಸ್ತ ಧರ್ಮಗುರು ಡೇರಿಕ್ ಫರ್ನಾಂಡಿಸ್ ತಿಳಿಸಿದರು.
ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದರು. ಸಂತೋಷ, ಪ್ರೀತಿ, ಶಾಂತಿ ಮತ್ತು ಆಧ್ಯಾತ್ಮಿಕ ನವೀಕರಣದ ಋತುವಾದ ಕ್ರಿಸ್‌ಮಸನ್ನು ಆಚರಿಸಲು ಜಗತ್ತು ಉತ್ಸಾಹದಿಂದ ತವಕಿಸುತ್ತಿದೆ.
ಡಿಸೆಂಬರ್ 25 ರಂದು ಆಚರಿಸಲಾಗುವ ಕ್ರಿಸ್‌ಮಸ್ ಸಂರಕ್ಷಕನಾದ ಯೇಸು ಕ್ರಿಸ್ತನ ಜನನವನ್ನು ಸೂಚಿಸುತ್ತದೆ. ಡಿಸೆಂಬರ್ 24 ರ ಮಧ್ಯರಾತ್ರಿ ಎಲ್ಲ ಚರ್ಚಗಳಲ್ಲಿ ಪ್ರಾರ್ಥನೆಯನ್ನು ಆಯೋಜಿಸಲಾಗಿದೆ.
ಕ್ರಿಸ್‌ಮಸ್ ಕ್ಯಾರೋಲ್‌ಗಳ ಗಾಯನ ನಡೆಯಲಿದೆ. ಬಡವರ ಬಗ್ಗೆ ಕಾಳಜಿ ವಹಿಸಲು ಮತ್ತು ಯಾರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಲು ಜನರನ್ನು ಪ್ರೇರೇಪಿಸಲಾಗುತ್ತದೆ.
ವಿವಿಧೆಡೆ ಹಾಡುಗಾರಿಕೆ. ಕ್ರಿಸ್ಮಸ್ ಕಾರ್ಯಕ್ರಮಗಳು ನಡೆಯಲಿವೆ. ಜನರ ನಡುವೆ ಪ್ರೀತಿಯನ್ನು ಭ್ರಾತೃತ್ವವನ್ನು ಮೂಡಿಸುವ ಸಲುವಾಗಿ ಕುಟುಂಬ ಸಭೆಗಳು ನಡೆಯುತ್ತವೆ.
ಡಿಸೆಂಬರ್ 29, 2024 ರಂದು ಬೆಳಗಾವಿಯ ಫಾತಿಮಾ ಕ್ಯಾಥೆಡ್ರಲ್‌ನಲ್ಲಿ 2025 ರ ಜುಬಿಲಿ ವರ್ಷದ ಮಹಾ ಉದ್ಘಾಟನೆ ನಡೆಯಲಿದೆ. ಅಲ್ಲಿ ಕರ್ನಾಟಕದ 5 ಜಿಲ್ಲೆಗಳಾದ ಬೆಳಗಾವಿ. ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ ಮತ್ತು ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ಜನರು ಆಗಮಿಸಲಿದ್ದಾರೆಂದು ಹೇಳಿದರು.