ಶಾಹರನ್ನು ಸಂಪುಟ ಸಭೆಯಿಂದ ಕೈ ಬಿಡಿ
ಬೆಳಗಾವಿಯಲ್ಲಿ ವಕೀಲರಿಂದ ಪ್ರತಿಭಟನೆ
ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ
ಸಂವಿಧಾನದ ಹಕ್ಕಿನಿಂದಲೇ ಶಾಹಗೆ ದೊರೆತಿದೆ ಸಚಿವಸ್ಥಾನ
ಡಾ.ಬಾಬಾಸಾಹೇಬ್ ಅಂಬೇಡ್ಕರರನ್ನು ಅಪಮಾನಿಸಿದ ಗೃಹ ಸಚಿವ ಅಮೀತ್ ಶಾಹ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಬೆಳಗಾವಿಯ ಅಹಿಂದ ಮನುವಾದಿಗಳ ಸಂಘ ಮತ್ತು ಬೆಳಗಾವಿಯ ನ್ಯಾಯವಾದಿಗಳು ಪ್ರತಿಭಟನೆಯನ್ನು ನಡೆಸಿದರು.
ಬೆಳಗಾವಿಯ ಅಹಿಂದ ಮನುವಾದಿಗಳ ಸಂಘ ಮತ್ತು ಬೆಳಗಾವಿಯ ನ್ಯಾಯವಾದಿಗಳು ಪ್ರತಿಭಟನೆಯನ್ನು ನಡೆಸಿ, ಡಾ.ಬಾಬಾಸಾಹೇಬ್ ಅಂಬೇಡ್ಕರರನ್ನು ಅಪಮಾನಿಸಿದ ಗೃಹ ಸಚಿವ ಅಮೀತ್ ಶಾಹ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಈ ಕುರಿತಾದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು. ಡಾ.ಬಾಬಾಸಾಹೇಬ್ ಅಂಬೇಡ್ಕರರನ್ನು ಅಪಮಾನಿಸಿದ ಗೃಹ ಸಚಿವ ಅಮೀತ್ ಶಾಹ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಚಹಾ ಮಾರುವ ವ್ಯಕ್ತಿ ದೇಶದ ಪಿಎಂ, ಕುರಿ ಕಾಯುವ ವ್ಯಕ್ತಿ ರಾಜ್ಯದ ಸಿಎಂ ಆಗಬೇಕೆಂದರೇ ಅದಕ್ಕೆ ಬಾಬಾಸಾಹೇಬರು ನೀಡಿದ ಸಾಂವಿಧಾನಿಕ ಹಕ್ಕೇ ಕಾರಣ. ಶಾಹ್ ಹೇಳಿಕೆಯಿಂದ ದೇಶದ ಜನರಿಗೆ ನೋವುಂಟಾಗಿದೆ. ತಕ್ಷಣ ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ನ್ಯಾಯವಾದಿ ಎನ್.ಆರ್. ಲಾತೂರ್ ಒತ್ತಾಯಿಸಿದರು.