Breaking News

ರಗಡ್ ಲುಕ್​ನಲ್ಲಿ ಮಾಸ್ ಆಗಿ ಕಾಣಿಸಿಕೊಂಡ ಕಿಚ್ಚ

Spread the love

ಮ್ಯಾಕ್ಸ್’ ಸಿನಿಮಾ ಮೇಲೆ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರಲ್ಲೂ ಆ್ಯಕ್ಷನ್​ ಇಷ್ಟಪಡುವ ಪ್ರೇಕ್ಷಕರಿಗೆ ಈ ಸಿನಿಮಾದ ಮೇಲೆ ಭಾರಿ ಭರವಸೆ ಇದೆ. ಈ ಚಿತ್ರದ ಟ್ರೇಲರ್​ ಇಂದು (ಡಿಸೆಂಬರ್​ 22) ಬಿಡುಗಡೆ ಆಗಿದೆ. ಮ್ಯಾಕ್ಸಿಮಮ್ ಮಾಸ್​ ಆಗಿ ಸುದೀಪ್ ಅವರು ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಡಿ.25ರಂದು ಈ ಸಿನಿಮಾ ತೆರೆಕಾಣಲಿದೆ.

ಕಿಚ್ಚ ಸುದೀಪ್ ಅವರ ಮ್ಯಾಕ್ಸಿಮಮ್ ಮಾಸ್​ ಅವತಾರವನ್ನು ನೋಡಲು ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆ. ಡಿಸೆಂಬರ್​ 25ರಂದು ‘ಮ್ಯಾಕ್ಸ್’ ಸಿನಿಮಾ ಬಿಡುಗಡೆ ಆಗಲಿದ್ದು, ಜನರ ನಿರೀಕ್ಷೆಯನ್ನು ಡಬಲ್ ಮಾಡಲು ಟ್ರೇಲರ್​ ರಿಲೀಸ್ ಮಾಡಲಾಗಿದೆ. ಇಂದು (ಡಿ.22) ಚಿತ್ರದುರ್ಗದಲ್ಲಿ ಪ್ರೀ-ರಿಲೀಸ್​ ಇವೆಂಟ್ ಮಾಡಲಾಗಿದೆ.

ಇದೇ ವೇದಿಕೆಯಲ್ಲಿ ಟ್ರೇಲರ್​ ಅನಾವರಣ ಮಾಡಲಾಗಿದೆ. ಈ ಸಿನಿಮಾಗೆ ವಿಜಯ್ ಕಾರ್ತಿಕೇಯ ಅವರು ನಿರ್ದೇಶನ ಮಾಡಿದ್ದಾರೆ. ಟ್ರೇಲರ್​ನಲ್ಲಿ ಸುದೀಪ್ ಅವರ ಮಾಸ್ ಲುಕ್ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ.ಇದು ಒಂದೇ ರಾತ್ರಿಯಲ್ಲಿ ನಡೆಯುವ ಆ್ಯಕ್ಷನ್ ಕಹಾನಿ. ಈ ಚಿತ್ರದಲ್ಲಿ ಸುದೀಪ್ ಅವರಿಗೆ ಹೀರೋಯಿನ್ ಇಲ್ಲ. ಪಕ್ಕಾ ಆ್ಯಕ್ಷನ್​ ಬಯಸುವ ಪ್ರೇಕ್ಷಕರಿಗೆ ‘ಮ್ಯಾಕ್ಸ್’ ಸಿನಿಮಾದಲ್ಲಿ ಮನರಂಜನೆಯ ಫುಲ್ ಮೀಲ್ಸ್ ಇರಲಿದೆ ಎಂಬುದು ಟ್ರೇಲರ್​ನಲ್ಲೇ ಕಾಣಿಸುತ್ತಿದೆ. ಇನ್ನು, ಖಡಕ್ ಆದಂತಹ ಡೈಲಾಗ್​ಗಳ ಮೂಲಕವೂ ಸುದೀಪ್ ಅವರು ವಿಲನ್​ಗಳಿಗೆ ನಡುಕು ಹುಟ್ಟಿಸಿದ್ದಾರೆ.


Spread the love

About Laxminews 24x7

Check Also

ತಂದೆಗೆ ಲಿವರ್ ದಾನ ಮಾಡಿ ಮಹಾದಾನಿ ಆದ ಮಗ

Spread the loveಬೆಳಗಾವಿ: ಲಿವರ್ ಸಂಪೂರ್ಣವಾಗಿ ನಿಷ್ಕ್ರೀಯವಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ರೋಗಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಜೀವವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ