ದೇವನಹಳ್ಳಿ ಟೌನ್ ನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದೆ ಮಾತನಾಡಿದೆ.
ಈಗಾಗಲೇ ದೇವನಹಳ್ಳಿ ಪಟ್ಟಣದ ಕೆಂಪೇಗೌಡ ಸರ್ಕಲ್ ನಿಂದ ರಾಣಿ ಸರ್ಕಲ್ ವರೆಗೆ 3.5 ಕಿ.ಮೀ ನಷ್ಟು 4 ಪಥದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 25 ಕೋಟಿ ನೀಡಿದ್ದಾರೆ. ಅದರ ಗುದ್ದಲಿಪೂಜೆ ಇಂದು ನೆರವೇರಿಸಲಾಗಿದೆ.
ವಿಜಯಪುರ ಪಟ್ಟಣದಲ್ಲಿ ಕೋಲಾರ ಜಿಲ್ಲೆಗೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರುವ 5.2 ಕಿ.ಮೀ ರಸ್ತೆಗೆ 25 ಕೋಟಿ ಮಂಜೂರು ಮಾಡಲಾಗಿದ್ದು ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗೆ ಹೆಚ್ಚುವರಿಯಾಗಿ 15 ಕೋಟಿ ಅವಶ್ಯಕತೆ ಇದ್ದು ಮಂಜೂರು ಮಾಡಲು, ದೇವನಹಳ್ಳಿ ಟೌನ್ ನಲ್ಲಿ ರಸ್ತೆಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು 04 ಕೋಟಿ ರೂಗಳ ಅವಶ್ಯಕತೆ ಇದೆ ಹಾಗೆಯೇ ತಾಲ್ಲೂಕಿನಾದ್ಯಂತ ರಸ್ತೆಗಳ ಅಭಿವೃದ್ಧಿಗೆ 40 ಕೋಟಿ ರೂಪಾಯಿಗಳ ಅವಶ್ಯಕತೆ ಇದ್ದು, ಮಂಜೂರು ಮಾಡಲು ಲೋಕೋಪಯೋಗಿ ಸಚಿವರಲ್ಲಿ ಮನವಿ ಮಾಡಿದೆ.
ಇದಕ್ಕೆ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸ್ಪಂದಿಸಿ ವಿಜಯಪುರ ರಸ್ತೆಗೆ ತುರ್ತಾಗಿ ಅವಶ್ಯಕತೆ ಇರುವ ಹಣವನ್ನು ಇದೇ ಬಜೆಟ್ ನಲ್ಲಿ ನೀಡಲಾಗುವುದು, ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ಅವಶ್ಯಕತೆಯಿರುವ 40 ಕೋಟಿ ಪ್ರಸ್ತಾವನೆಯಲ್ಲಿ 20 ಕೋಟಿ ಮೊದಲ ಹಂತದಲ್ಲಿ ನೀಡಲಾಗುವುದು. 2 ನೇ ಹಂತದಲ್ಲಿ 20 ಕೋಟಿ ನೀಡಲಾಗುವುದು ಎಂದರು. ಮುಂದಿನ ದಿನಗಳಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ 5 ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ.ನಾರಾಯಣಸ್ವಾಮಿ, ಬಯಪ ಅಧ್ಯಕ್ಷರಾದ ಶಾಂತ ಕುಮಾರ್, ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್, ಜಿ.ಪಂ ಸಿ.ಇ.ಒ ಡಾ.ಕೆ.ಎನ್ ಅನುರಾಧ, ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.