ಕಲಬುರಗಿ : ಜಿಲ್ಲೆಯಲ್ಲಿ ಜಯದೇವ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಲಬುರಗಿ ಬೆಂಗಳೂರಿನಿಂದ ಸಾವಿರ ಕಿ,ಮೀ ದೂರದಲ್ಲಿದೆ. ಈ ಸ್ಥಳಗಳನ್ನು ಅಭಿವೃದ್ದಿ ಮಾಡಲು ಶಾಸಕರಿಗೆ ಕಿವಿ ಮಾತು ಹೇಳಿ ಎಂದು ಮುಖ್ಯಮಂತ್ರಿಗಳಿಗೆ ಬೇಡಿಕೆ ಇಟ್ಟರು.
ಕಲಬುರಗಿಯಿಂದ ಏಳು ಜನ ಶಾಸಕರು, ಕಲ್ಯಾಣ ಕರ್ನಾಟಕದಿಂದ ಐದು ಜನ ಎಮ್.ಪಿ ಗಳನ್ನ ಕಳುಹಿಸಿದ್ದೆವೆ. ಈಗ ಜಯದೇವ ಆಸ್ಪತ್ರೆಯಾಗಿದೆ. ಇದರ ಜೊತೆಗೆ ನಿಮಾನ್ಸ್ ಆಸ್ಪತ್ರೆಯ ಬ್ರ್ಯಾಂಚ್ ಇಲ್ಲಿ ನಿರ್ಮಾಣ ಆಗಬೇಕು,
ಡಯಾಬೇಟೋಲಜಿ ಕೂಡ ಇಲ್ಲಿ ನಿರ್ಮಾಣವಾಗಬೇಕು. ಸಿದ್ದರಾಮಯ್ಯನವರು ಇಲ್ಲಿಯ ಶಾಸಕರಿಗೆ ಕಿವಿ ಮಾತು ಹೇಳಿ ಕೆಲಸ ಮಾಡಿಸಬೇಕು ಎಂದು ಹೇಳಿದರು.ಮುಂದುವರಿದು ಮಾತನಾಡಿದ ಖರ್ಗೆ ‘ಗುಲ್ಬರ್ಗಾ ವಿವಿ ಅತಿ ಹಿಂದುಳಿದ ವಿಶ್ವವಿದ್ಯಾಲಯ ಆಗಿದೆ.
ಇಲ್ಲಿ ಪ್ರೊಫೆಸರ್ ಹುದ್ದೆಗಳು ಖಾಲಿ ಇವೆ , ವಿದ್ಯಾರ್ಥಿಗಳು ಸಂಶೋಧನೆ ಮಾಡೋದಕ್ಕೆ ಆಗುತ್ತಿಲ್ಲ. ಮೈಸೂರಿಗೆ 300 ಕೋಟಿ ಕೊಟ್ಟಿದ್ದೀರ ಅಲ್ವಾ ಎಂದು ಸಿದ್ದರಾಮಯ್ಯರಿಗೆ ಪ್ರಶ್ನಿಸಿದರು. ಈ ವೇಳೆ ಸಿದ್ದರಾಮಯ್ಯ 100 ಕೋಟಿ ಕೊಟ್ಟಿದ್ದೇನೆ ಎಂದು ಹೇಳಿದರು.
Laxmi News 24×7