Breaking News

ಕ್ರಾಂತಿವೀರ ಬ್ರಿಗೇಡ್‌ ಉದ್ಘಾಟನೆಗೆ ಮೂಹೂರ್ತ ಫಿಕ್ಸ್…..

Spread the love

 

ಕ್ರಾಂತಿವೀರ ಬ್ರಿಗೇಡ್‌ ಉದ್ಘಾಟನೆಗೆ ಮೂಹೂರ್ತ ಫಿಕ್ಸ್…..
ಫೆಬ್ರುವರಿ 4 ರಂದು ಬ್ರಿಗೇಡ್ ಉದ್ಘಾಟನೆ
ವಿವಿಧ ಮಠಾಧೀಶರು ಕಾರ್ಯಕ್ರಮದ ಸ್ಥಳಕ್ಕೆ ಭೇಟಿ
ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಸ್ಥಳ ಪರಿಶೀಲನೆ

ಕ್ರಾಂತಿವೀರ ಬ್ರಿಗೇಡ್‌ ಉದ್ಘಾಟನೆಗೆ ಮೂಹೂರ್ತ ಫಿಕ್ಸ್ ಆಗಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ 2025 ಫೆಬ್ರುವರಿ 4 ರಂದು ಕ್ರಾಂತಿವೀರ ಬ್ರಿಗೇಡ್‌ ಉದ್ಘಾಟನೆಗೊಳ್ಳಲಿದೆ.

ಬ್ರಿಗೇಡ್‌ ಉದ್ಘಾಟನೆಗೆ ಕ್ರಾಂತಿ ಪುರುಷ ಬಸವೇಶ್ವರ ಜನ್ಮ ಸ್ಥಳ ಬಸವನಬಾಗೇವಾಡಿಯ ಗುರುಕೃಪಾ ಶಾಲೆಯ ಪಕ್ಕದ ವಿಶಾಲದ ಮೈದಾನವನ್ನ ನಿಗದಿ ಪಡಿಸಲಾಗಿದೆ, ಈ ಹಿನ್ನಲೆಯಲ್ಲಿ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಸೇರಿದಂತೆ ವಿವಿಧ ಮಠಾಧೀಶರು ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿ ಉದ್ಘಾಟನೆಗೆ ಸಕಲ ಸಿದ್ದತೆಯನ್ನ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಕ್ರಾಂತಿವೀರ ಬ್ರಿಗೇಡ್‌ನ ರಾಜ್ಯ ಅಧ್ಯಕ್ಷರಾಗಿ ಬಸವರಾಜ ಬಾಳಿಕಾಯಿ ಕಾರ್ಯಧ್ಯಕ್ಷರಾಗಿ ಕೆ, ಕಾಂತೇಶ ಈಶ್ವರಪ್ಪ ಆಯ್ಕೆಯಾಗಿರುವದು ಕುತೂಹಲಕ್ಕೆ ಕಾರಣವಾಗಿದೆ. ಇನ್ನೂ
ಮೇಲ್ನೋಟಕ್ಕೆ ಹಿಂದೂ ಧರ್ಮ ರಕ್ಷಣೆಗಾಗಿ ರಾಷ್ಟ್ರೀಯ ಜಾಗೃತೆಗಾಗಿ ಕ್ರಾಂತಿವೀರ ಬ್ರಿಗೇಡ್‌ ಸಂಘಟನೆ ಹುಟ್ಟಿಕೊಂಡದೆ ಎನ್ನಲಾಗಿದೆ ಸದ್ಯ ಬ್ರಿಗೇಡ್‌ನ ಕಾರ್ಯಾಧ್ಯಕ್ಷರಾಗಿ ಈಶ್ವರಪ್ಪನವರ ಮಗ ಕಾಂತೇಶ ಅವರ ಆಯ್ಕೆ ಬಾರಿ ಕುತೂಹಲ ಮೂಡಿಸಿದೆ. ಕ್ರಾಂತಿವೀರ ಬ್ರಿಗೇಡ್‌ ಭವಿಷ್ಯದಲ್ಲಿ ನೊಂದವರ ಧ್ವನಿ ಯಾಗುತ್ತದೆಯೋ ಅಥವಾ ಕಾಂತೇಶ ಅವರ ರಾಜಕೀಯ ಭವಿಷ್ಯ ರೂಪಿಸುವ ವೇದಿಕೆಯಾಗುತ್ತದೆಯೋ ಕಾದು ನೋಡಬೇಕಾಗಿದೆ.


Spread the love

About Laxminews 24x7

Check Also

ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ – ಆಸ್ಪತ್ರೆಗೆ ದಾಖಲು

Spread the loveಶಿವಮೊಗ್ಗ: ಇಂದಿನಿಂದ ಆರಂಭವಾದ ಸಾಗರ ಮಾರಿಕಾಂಬ ದೇವಿ ಜಾತ್ರೆಯ ಹಿನ್ನೆಲೆಯಲ್ಲಿ ದೇವಿಯ ದರ್ಶನಕ್ಕೆ ತೆರಳಿದ್ದ ರಾಜ್ಯ ರಾಜಕಾರಣದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ