Breaking News

ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜ್ಯದ ಶಾಸಕರಿಗೆ ರಕ್ಷಣೆ ಇಲ್ಲ”

Spread the love

ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜ್ಯದ ಶಾಸಕರಿಗೆ ರಕ್ಷಣೆ ಇಲ್ಲ”

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಜನ ಹಿತ ಸಂಪೂರ್ಣ ಮರೆತು ತನ್ನ ದರ್ಪದ ಆಡಳಿತ ನಡೆಸುತ್ತಿದೆ. ಹೆಜ್ಜೆ ಹೆಜ್ಜೆಗೂ ದ್ವೇಷದ ರಾಜಕಾರಣ ತನ್ನ ಆಡಳಿತದಲ್ಲಿ ಅಳವಡಿಸಿಕೊಂಡಿದೆ.

ಕಳೆದ 18 ತಿಂಗಳ ಆಡಳಿತ ಅವಧಿಯಲ್ಲಿ ನಡೆದಿರುವ ಅಪಾರ ಭ್ರಷ್ಟಾಚಾರ ಜೊತೆಗೆ ಸ್ವತಃ ಮುಖ್ಯಮಂತ್ರಿಗಳು ಮೂಡಾ ಹಗರಣದಲ್ಲಿ ಸಿಲುಕಿ ನನ್ನದೇನು ತಪ್ಪಿಲ್ಲ ಎಂದು ಬಂಡತನ ಪ್ರದರ್ಶಿಸುತ್ತಾ ಅದರಿಂದ ಆಚೆ ಬರಲು ಹೆಣಗಾಡುತ್ತಿರುವುದು ನಮಗೆಲ್ಲ ತಿಳಿದಿದೆ.

ತನ್ನ ಸರ್ಕಾರದ ಒಂದೊಂದೇ ತಪ್ಪುಗಳನ್ನು ಮುಚ್ಚಿಕೊಂಡು ಜನರ ಗಮನ ಬೇರೆಡೆ ಸೆಳೆಯಲು ದಿನ ಪ್ರತಿ ಒಂದೊಂದು ತಂತ್ರ ಕುತಂತ್ರಗಳನ್ನು ಹೆಣೆಯುತ್ತಿದೆ. ಸರ್ಕಾರದ ವಿರುದ್ಧ, ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡಿದರೆ ಸುಮ್ಮನೆ ಕೂರುವುದಿಲ್ಲ ಆಡಳಿತವನ್ನು ದುರುಪಯೋಗ ಪಡಿಸಿಕೊಂಡು ನಿಮ್ಮನ್ನು ರಾಜಕೀಯವಾಗಿ ಹಣೆಯುತ್ತೇವೆ ಎಂದು ಎಚ್ಚರಿಕೆ ಕೊಡುತ್ತಿದೆ.

ಸರ್ವ ಜನಾಂಗದ ಶಾಂತಿಯ ತೋಟ ಎಂದು ಬೊಬ್ಬೆ ಹೊಡೆಯುವ ನೀವು ಮನದಲ್ಲಿ ಅಶಾಂತಿಯ ಹಗೆ ಸಾಧಿಸುತ್ತ ಆಡಳಿತ ನಡೆಸುತ್ತಿದ್ದೀರಿ. ಈಗ ನಮ್ಮ ನಾಯಕರಾದ ಶ್ರೀ ಸಿ.ಟಿ. ರವಿ ಅವರನ್ನು ಹಣಿಯಲು ಇಡೀ ಕಾಂಗ್ರೆಸ್ ಸರ್ಕಾರವೇ ಟೋಂಕ ಕಟ್ಟಿ ನಿಂತಂತೆ ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ.

ಸದನದಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆ ಕಡತದಲ್ಲಿ ದಾಖಲಾಗಿರುತ್ತದೆ ಜೊತೆಗೆ ವಿಡಿಯೋ ಚಿತ್ರೀಕರಣ ಕೂಡ ನಡೆದಿರುತ್ತದೆ. ಇಷ್ಟೆಲ್ಲಾ ಇದ್ದರೂ ಕೂಡ ಯಾವುದೇ ನಿಷ್ಪಕ್ಷಪಾತ ತನಿಖೆ ನಡೆಸದೆ ಮಾನಸಿಕವಾಗಿ ಸಿ.ಟಿ. ರವಿ ಅವರನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ.

ಪೊಲೀಸ್ ಇಲಾಖೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಮನಸೋಇಚ್ಛೆ ಅವರನ್ನು ಕಟ್ಟಿ ಹಾಕುವ ಪ್ರಯತ್ನ ನಡೆಯುತ್ತಿದೆ. ತನ್ನ ಸರ್ಕಾರದಲ್ಲಿ ಸಚಿವರು ಭ್ರಷ್ಟಾಚಾರದಲ್ಲಿ ಮುಳುಗಿ ಆರೋಪ ಎದುರಿಸುತ್ತಿರುವವರನ್ನು ರಕ್ಷಣೆ ಮಾಡಲು ನಿಂತು ಯಾವುದೇ ತಪ್ಪು ಮಾಡಿರದ ನಮ್ಮ ನಾಯಕರನ್ನು ನಡೆಸಿಕೊಳ್ಳುತ್ತಿರುವ ರೀತಿ ನಿಜಕ್ಕೂ ನಾಚಿಕೆ ತರುವ ಸಂಗತಿ.

ಯಾವುದೇ ತಪ್ಪು ಮಾಡದ ನಮ್ಮ ನಾಯಕರನ್ನು ಸಂಪೂರ್ಣ ಕುಗ್ಗಿಸಿ ರಾಜಕೀಯ ಬಣ್ಣ ಬಳಿದು ಅವರನ್ನು ಧಮನಿಸಲು ಪಣ ತೊಟ್ಟಿರುವ ನೀವು ತಾತ್ಕಾಲಿಕವಾಗಿ ಗೆಲುವು ದಕ್ಕಿಸಿಕೊಳ್ಳಬಹುದೇ ವಿನಹ ಈ ದ್ವೇಷವೆಂಬ ಯುದ್ಧದಲ್ಲಿ ಶಾಶ್ವತ ಗೆಲುವು ನಮ್ಮದೇ ಎಂಬುದನ್ನು ಮರೆಯಬೇಡಿ.   bjp team

#CTRavi #JanaVirodhiCongress #CMOfKarnataka #Siddaramaiah #DKShivakumar #BJPKarnataka #PMOIndia


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ