Breaking News

ಲಾರಿ ಹಿಂಬದಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

Spread the love

ರಾಯಚೂರು: ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದುಗಲ್ ಹೊರವಲಯದ ಜನತಾ ಕಾಲೋನಿ ಬಳಿ ಇಂದು ಸಂಭವಿಸಿದೆ.

ಉಮಲೂಟಿ ಗ್ರಾಮದ ಕನಕಪ್ಪ ಮತ್ತು ಕುಷ್ಟಗಿ ತಾಲೂಕಿನ ವಿಠ್ಠಲಾಪುರದ ಜಗದೀಶ್ ಮೃತ ದುರ್ದೈವಿಗಳು. ಮುದುಗಲ್ ಕಡೆಯಿಂದ ತಾವರಗೆರೆ ಕಡೆ ರಸ್ತೆ ಮಾರ್ಗವಾಗಿ ತೆರಳುವ ವೇಳೆ ಈ ದುರ್ಘಟನೆ ಜರುಗಿದೆ. ಮುದುಗಲ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಜನತಾ ಕಾಲೋನಿ ಬಳಿ ಸಂಭವಿಸಿದ ರಸ್ತೆ ಅಫಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಮಿರಜ್‌ನಲ್ಲಿ 1 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳ ಜಪ್ತಿ

Spread the love ಚಿಕ್ಕೋಡಿ:ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿ ಇತ್ತಿಚಿಗೆ ವಿಶೇಷ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು, ಬರೋಬ್ಬರಿ 1 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ