Breaking News

ಎಲ್ಲರನ್ನೂ ಮಿಸ್​ ಮಾಡಿಕೊಳ್ಳುತ್ತೇನೆ, ಜ.26ರಂದು ಸಿಗೋಣ’;ಶಿವಣ್ಣ

Spread the love

ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಚಿಕಿತ್ಸೆ ಹಿನ್ನೆಲೆ, ಕಳೆದ ರಾತ್ರಿ ಅಮೆರಿಕ ಫ್ಲೈಟ್​ ಹತ್ತಿದರು. ವೈದ್ಯಕೀಯ ಪ್ರಕ್ರಿಯೆ ನಿಟ್ಟಿನಲ್ಲಿ ಅಮೆರಿಕಕ್ಕೆ ಪ್ರಯಾಣ ಬೆಳೆಸುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದರು. ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ವಿಶೇಷ ಸ್ಥಾನಮಾನ ಗಳಿಸಿರುವ ಶಿವಣ್ಣ ಫ್ಲೋರಿಡಾದ ಮಿಯಾಮಿಯಲ್ಲಿ ಡಿಸೆಂಬರ್ 24 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

ಹೊರಡುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಜನಪ್ರಿಯ ನಟ, ”ಇಂಥ ಸಂದರ್ಭ ನಾವೇ ಕೊಂಚ ಭಾವುಕರಾಗುತ್ತೇವೆ. ಆದ್ರೆ ಹೆದರಬೇಡಿ. ಪ್ಯಾರಾಮೀಟರ್ಸ್​ ಎಲ್ಲವೂ ಚೆನ್ನಾಗಿದೆ. ಚೆಕ್​ ಮಾಡಿದಾಗ, ಎವ್ರಿಂಥಿಗ್​ ಈಸ್​ ಗುಡ್​​. ಆದ್ರೂ ಸ್ವಲ್ಪ ಆತಂಕ ಅನ್ನೋದು ಇರುತ್ತದೆ. ಮನೆಯಿಂದ ಹೊರಡುತ್ತಿದ್ದೀವಲ್ವಾ, ನಮ್ಮವರನ್ನು ನೋಡಿದಾಗ ಸ್ವಲ್ಪ ಎಮೋಷನಲ್​ ಆದೆ. ಅಭಿಮಾನಿಗಳಿದ್ದಾರೆ. ಸ್ವಲ್ಪ ದುಃಖ ಅಷ್ಟೇ, ಇನ್ನೇನಿಲ್ಲ. ಅದರ್​ವೈಸ್​, ಐ ಆ್ಯಮ್​ ವೆರಿ ಕಾನ್ಫಿಡೆಂಟ್​. 24ರಂದು ಸರ್ಜರಿ ಏನು ನಡೆಯಲಿದೆಯೋ ಅದು ಪಾಸಿಟಿವ್​ ಆಗಿದೆ. ಅದರ ಬಗ್ಗೆ ಯೋಚನೆ ಏನಿಲ್ಲ” ಎಂದು ತಿಳಿಸಿದರು.

ಗ್ಲೋರಿಫೈ ಮಾಡಲಿಲ್ಲ’: ”30-35 ದಿನಗಳು ಮನೆಯಿಂದ, ಭಾರತದಿಂದ ಆಚೆ ಹೋಗುತ್ತಿದ್ದೇವೆಂದಾಗ ಒಂದು ನೋವಿರುತ್ತದೆ. ಆದ್ರೆ ಎಲ್ಲರ ಶುಭ ಹಾರೈಕೆಗಳಿವೆ. ಇತರೆ ಸ್ಟಾರ್ಸ್ ಅಭಿಮಾನಿಗಳದ್ದೂ ವಿಶಸ್​ ಇದೆ. ಇದನ್ನು ನೋಡಿದ್ರೆ ಖುಷಿಯಾಗುತ್ತದೆ. ಮಾಧ್ಯಮದವರ ಬೆಂಬಲವೂ ಇದೆ. ನನಗೆ ಹೀಗಾಗಿದೆ ಎಂದು ಗೊತ್ತಾದಗಲೂ ಯಾರೂ ಗ್ಲೋರಿಫೈ ಮಾಡಲಿಲ್ಲ. ಅದು ನನಗೆ ಬಹಳ ಖುಷಿಯಾಯಿತು. ಅಷ್ಟೊಂದು ಪ್ರೀತಿ, ಗೌರವ ನನ್ನ ಮೇಲಿಟ್ಟಿದ್ದಾರೆ. ಅದೊಂದು ಆಶೀರ್ವಾದ. ಜನವರಿ 26ಕ್ಕೆ ಇಲ್ಲಿರುತ್ತೇನೆ. ಜ.25ಕ್ಕೆ ಅಲ್ಲಿಂದ ಹೊರಡುತ್ತೇವೆ” ಎಂದು ಮಾಹಿತಿ ಹಂಚಿಕೊಂಡರು.

‘ಎಲ್ಲರನ್ನೂ ಮಿಸ್​ ಮಾಡಿಕೊಳ್ಳುತ್ತೇನೆ’: ಅಭಿಮಾನಿಗಳ ಪ್ರೀತಿ ವರ್ಣನಾತೀತ. ಎಲ್ಲರನ್ನೂ ಮಿಸ್​ ಮಾಡಿಕೊಳ್ಳುತ್ತೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಎಲ್ಲರಿಗೂ ಒಳ್ಳೆದಾಗ್ಲಿ ಎಂದರು.

ಉಪ್ಪಿ, ಕಿಚ್ಚನಿಗೆ ಬೆಸ್ಟ್ ವಿಶಸ್: ಇದೇ 20ಕ್ಕೆ ಉಪೇಂದ್ರ ಅವರ ‘ಯು ಐ’ ರಿಲೀಸ್​ ಆಗುತ್ತಿದೆ. 25ರಂದು ಸುದೀಪ್​ ಅವರ ಮ್ಯಾಕ್ಸ್​ ಬಿಡುಗಡೆ ಆಗುತ್ತಿದೆ. ಎರಡಕ್ಕೂ ಶುಭ ಹಾರೈಕೆಗಳು. ಈ ಸರಿ ಎಲ್ಲಾ ಕನ್ನಡ ಸಿನಿಮಾಗಳು ಚೆನ್ನಾಗಿ ಆಗುತ್ತಿದೆ, ಆಗಿದೆ. ಈ ಎರಡು ಸಿನಿಮಾಗಳು ಚೆನ್ನಾಗಿ ಆಗ್ಬಿಟ್ರೆ, ಬರುವ ವರ್ಷವೂ ಎಲ್ಲವೂ ಸ್ಟಾಂಗ್​ ಆಗುತ್ತೆ ಅನ್ನೋ ನಂಬಿಕೆ ಎಂದರು.


Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ