Breaking News

ಸರ್ಕಾರಿ ಶಾಲೆ, ಹಿಂದೂ ರುದ್ರಭೂಮಿ, ದೇವಸ್ಥಾನ ಇದ್ದರೆ ಅಲ್ಲಿ ವಕ್ಫ್​​ ಆಸ್ತಿ ಎಂದು ತರಲೇಬಾರದೆಂದು ಸೂಚಿಸಲಾಗಿದೆ.

Spread the love

ಬೆಳಗಾವಿ: ”ನಮ್ಮ ಸರ್ಕಾರ ಮುಜರಾಯಿ ದೇವಸ್ಥಾನಗಳ 10,700 ಎಕರೆ ಜಮೀನು ಖಾತೆ ಬದಲಾಯಿಸಿ ಸಂರಕ್ಷಿಸಿದ್ದರೆ, ವಕ್ಫ್​​​ಗೆ ಕೇವಲ 600 ಎಕರೆ ಜಮೀನಿನ ಖಾತೆ ಬದಲಾವಣೆ ಮಾಡಿದ್ದೇವೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆಯಲ್ಲಿ ವಕ್ಫ್ ನಿಲುವಳಿ ಸೂಚನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ”ಬಿಜೆಪಿ ವಕ್ಫ್ ವಿಚಾರವಾಗಿ ಸುಳ್ಳಿನ ಸರಮಾಲೆ ಹೇಳಿದೆ. 2004ರಿಂದೀಚೆಗೆ ರಾಜ್ಯದಲ್ಲಿ ಒಟ್ಟು 9,800 ವಕ್ಫ್ ಆಸ್ತಿ ಎಂದು ನಮೂದಾಗಿದೆ. ಇದರಲ್ಲಿ ಬಾಧಿತ ರೈತರ ಸಂಖ್ಯೆ 11,204. ಈ ಪೈಕಿ 9,121 ಮುಸಲ್ಮಾನರು ಬಾಧಿತರಾಗಿದ್ದಾರೆ. 2,080 ಮಾತ್ರ ಹಿಂದೂಗಳಿದ್ದಾರೆ. ಅಂದರೆ, 85% ಮುಸ್ಲಿಂಮರಿಗೆ ನೋಟಿಸ್ ಹೋಗಿದೆ‌. ಕೇವಲ 15% ಮಾತ್ರ ಹಿಂದೂಗಳಿಗೆ ರೈತರಿಗೆ ನೋಟಿಸ್ ಹೋಗಿದೆ” ಎಂದು ತಿಳಿಸಿದರು.

”ವಕ್ಫ್ ಮಾತ್ರ ಅಲ್ಲ ಮುಜರಾಯಿ ಆಸ್ತಿಯನ್ನೂ ನಮ್ಮ ಸರ್ಕಾರ ಸಂರಕ್ಷಣೆ ಮಾಡಿದೆ. ನಮ್ಮ ಸರ್ಕಾರ ಬಂದ ಬಳಿಕ 2023ರಲ್ಲಿ ನಾವು 5,402 ಎಕರೆ ಮುಜರಾಯಿ ದೇವಸ್ಥಾನಕ್ಕೆ ಖಾತೆ ಮಾಡಿದ್ದೇವೆ. 2024ರಲ್ಲಿ 5,287 ಎಕರೆ ಮುಜರಾಯಿ ದೇವಸ್ಥಾನಕ್ಕೆ ಖಾತೆ ಮಾಡಲಾಗಿದೆ. 10,700 ಎಕರೆ ಜಮೀನನ್ನು ದೇವಸ್ಥಾನಗಳ ಹೆಸರಿಗೆ ಖಾತೆ ಮಾಡಿದ್ದೇವೆ. ಆದರೆ, ವಕ್ಫ್ ಆಸ್ತಿ ಎಂದು ಖಾತೆ ಬದಲಾವಣೆ ಮಾಡಿರುವುದು ಕೇವಲ 600 ಎಕರೆ ಮಾತ್ರ” ಎಂದು ಮಾಹಿತಿ ನೀಡಿದರು.


Spread the love

About Laxminews 24x7

Check Also

ಲಂಚದ ಹಣ ನುಂಗಿ ಭಂಡತನ ಮೆರೆದೆ ಅಧಿಕಾರಿ,ವಾಂತಿ ಮಾಡಿಸಿ ಕಕ್ಕಿಸಿದ ಲೋಕಾಯುಕ್ತ ಪೊಲೀಸ್​

Spread the loveಕೊಪ್ಪಳ, : ಕೊಪ್ಪಳ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಇಂದು ಸಂಜೆ ಕೊಪ್ಪಳ ಲೋಕಾಯುಕ್ತ (Lokayukta) ಪೊಲೀಸರ ಬಲೆಗೆ ಬಿದ್ದಿರುವಂತಹ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ