Breaking News

ಬಾಲ ಭವನ ನಿರ್ಮಾಣ ನನ್ನ ಕನಸು:ಲಕ್ಷ್ಮಿ ಹೆಬ್ಬಾಳ್ಕರ್

Spread the love

ಬೆಳಗಾವಿ: ”ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡುವುದು ಎಲ್ಲರ ಹಕ್ಕು. ಆದರೆ, ಪಂಚಮಸಾಲಿ ಮೀಸಲಾತಿ ಹೋರಾಟವು ಬೇರೆ ಪಕ್ಷ ಅಥವಾ ಪ್ರಚೋದಿತ ಜನರಿಂದ ಹೋರಾಟ ಆಗಬಾರದು ಎಂಬುದೇ ನನ್ನ ಆಸೆ” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದ ಜಿಲ್ಲಾ ಬಾಲಭವನ ನಿರ್ಮಾಣ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡುತ್ತಾ, ”ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು, ಕಾನೂನು ವ್ಯವಸ್ಥೆಗೆ ನಾವು ಮೊದಲು ಗೌರವ ಕೊಡಬೇಕು. ನಾನು ಸಮಾಜದ ಮಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಇವತ್ತು ನಾನು ಸರ್ಕಾರದಲ್ಲಿ ಮಂತ್ರಿ ಇದ್ದೇನೆ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ. ಹಾಗಾಗಿ, ಸರ್ಕಾರ ಹಾಗೂ ಸಮಾಜಕ್ಕೂ ಕೂಡ ಒಳ್ಳೆಯದನ್ನು ಬಯಸುತ್ತೇನೆ. ಇದು ನನ್ನ ಜವಾಬ್ದಾರಿ” ಎಂದರು.

ಬಾಲ ಭವನ ನಿರ್ಮಾಣ ನನ್ನ ಕನಸು: ”ರಾಜ್ಯದ ವಿವಿಧೆಡೆ ಹಾಗೂ ಜಿಲ್ಲೆಯಲ್ಲಿಯೂ ಬಾಲಭವನ ಕಟ್ಟಡಗಳು ಇವೆ. ಆದರೆ, ಬೆಳಗಾವಿಯಲ್ಲಿ ಇದುವರೆಗೆ ಬಾಲಭವನ ಕಟ್ಟಡವಿರಲಿಲ್ಲ. ಬಹುದಿನಗಳ ಕನಸು ಇವತ್ತು ಈಡೇರಿಕೆಯಾಗಿದೆ. ಸುಮಾರು 3 ಎಕರೆ ಜಾಗದಲ್ಲಿ 20 ಕೋಟಿ ವೆಚ್ಚದಲ್ಲಿ ಬಾಲಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಸದ್ಯಕ್ಕೆ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿಗೆ ನಡೆಯಲಿದೆ” ಎಂದು ತಿಳಿಸಿದರು.

”ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾಧಿಕಾರಿಗಳ ಗೃಹ ಕಚೇರಿ ಪಕ್ಕದ ಜಾಗದಲ್ಲಿ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದೆ. ಬೆಂಗಳೂರು ಹೊರತುಪಡಿಸಿ ದೊಡ್ಡಮಟ್ಟದ ಯೋಜನೆ ಇದಾಗಿದೆ. ಅಧಿಕಾರ ಸಿಕ್ಕ ಮೇಲೆ ತವರು ಜಿಲ್ಲೆಗೆ ಏನಾದರೂ ಮಾಡಬೇಕು ಎಂಬ ಆಸೆ. ಅದಕ್ಕೆ ಬಾಲಭವನ ನಿರ್ಮಾಣ ಮಾಡಬೇಕು ಎಂದುಕೊಂಡಿದ್ದೆ. ಮಕ್ಕಳಿಗೆ ಆಟ ಆಡಲು ಒಳ್ಳೆಯ ಕೆಲಸ ಮಾಡಲು ಪ್ಲಾನ್ ಮಾಡಿದ್ದು, ಬಾಲಭವನ, ಟ್ರೈನ್ ಟ್ರ್ಯಾಕ್, ಥೇಟರ್ ಸೇರಿದಂತೆ ಹಲವು ಯೋಜನೆ ಇದಾಗಿದೆ. ಕಳೆದ ಬಾರಿ ನಮ್ಮ ಜಿಲ್ಲೆಗೆ 300 ಅಂಗನವಾಡಿ ಮಂಜೂರಾಗಿದ್ದು, ಈ ಬಾರಿ ಅದನ್ನು ಡಬಲ್ ಮಾಡುತ್ತೇವೆ” ಎಂದು ಭರವಸೆ ನೀಡಿದರು.


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ