Breaking News

ಎರಡು ತಿಂಗಳ ಹಿಂದೆಯೇ ದೇವರ ಕೋಣ ನಾಪತ್ತೆ ಹುಡುಕಿಕೊಡುವಂತೆ ರಟ್ಟಿಹಳ್ಳಿ ಪೊಲೀಸರಿಗೆ ಮನವಿ

Spread the love

ಹಾವೇರಿ: ದೇವರ ಕೋಣ ನಾಪತ್ತೆಯಾಗಿದ್ದು, ಹುಡುಕಿ ಕೊಡುವಂತೆ ಗ್ರಾಮಸ್ಥರು ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಕರಿ ಗ್ರಾಮದಲ್ಲಿ ನಡೆದಿದೆ.

ಮಕರಿ ಗ್ರಾಮದ ಆರಾಧ್ಯದೈವ ದುರ್ಗಾದೇವಿ. ನಾಲ್ಕು ವರ್ಷಗಳ ಹಿಂದೆ ದುರ್ಗಾದೇವಿಯ ಹೆಸರಿನಲ್ಲಿ ಕೋಣವನ್ನು ಬಿಡಲಾಗಿತ್ತು. ಗ್ರಾಮದಲ್ಲಿಯೇ ಕೋಣ ಓಡಾಡಿಕೊಂಡು ಮೇವು ತಿಂದುಕೊಂಡು ಇತ್ತು. ಈಗ ಎರಡು ತಿಂಗಳ ಹಿಂದೆ ದೇವರ ಕೋಣ ನಾಪತ್ತೆಯಾಗಿದೆ. ಗ್ರಾಮದ ಜನರು ಹಾಗೂ ಸಮಿತಿ ಸದಸ್ಯರು ಹುಡುಕಾಟ ನಡೆಸಿದರೂ ಕೋಣ ಮಾತ್ರ ಪತ್ತೆಯಾಗಿಲ್ಲ. ಇದೀಗ ಗ್ರಾಮಸ್ಥರು ದೇವರ ಕೋಣ ಹುಡುಕಿಕೊಡುವಂತೆ ರಟ್ಟಿಹಳ್ಳಿ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಎರಡು ತಿಂಗಳ ಹಿಂದೆಯೇ ಕೋಣ ನಾಪತ್ತೆಯಾಗಿದೆ. ಗ್ರಾಮದ ಜನರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಟ ಮಾಡಿದ್ದಾರೆ. ಆದರೂ ಸಹ ದೇವರ ಕೋಣ ಸಿಕ್ಕಿಲ್ಲ. ಗ್ರಾಮದ ಆರಾಧ್ಯದೈವ ಗ್ರಾಮದ ದೇವಿಯ ಕೋಣ ಗ್ರಾಮದಲ್ಲಿಯೇ ಓಡಾಡಿಕೊಂಡು ಇರಬೇಕು. ಅದು ಗ್ರಾಮದಲ್ಲಿಯೇ ಇದ್ದರೆ ಗ್ರಾಮದ ಜನರಿಗೆ ಹಾಗೂ ಗ್ರಾಮಕ್ಕೆ ಒಳಿತು ಆಗುತ್ತದೆ ಎನ್ನುವ ನಂಬಿಕೆ ಗ್ರಾಮದ ಜನರದ್ದು. ಹೀಗಾಗಿ ಆದಷ್ಟು ಬೇಗ ಕೋಣವನ್ನು ಹುಡುಕಿಕೊಡಿ ಎಂದು ಗ್ರಾಮಸ್ಥರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ: ಸತೀಶ್ ಜಾರಕಿಹೊಳಿಗೆ ಬಿಗ್​ ರಿಲೀಫ್

Spread the loveಬೆಂಗಳೂರು, (ಡಿಸೆಂಬರ್ 12): ಸಚಿವ ಸತೀಶ್ ಜಾರಕಿಹೊಳಿ ವಿರುದ್ಧದ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ ಪ್ರಕರಣವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ