ಪಂಚಮಸಾಲಿ ಹೋರಾಟದ ವೇಳೆ ಲಾಠಿ ಚಾರ್ಜ್‌ಗೆ ಆರ್ಡರ್ ಮಾಡಿದ್ದು, ಬೆಳಾಗವಿ ಎಸ್ಪಿ ಅವರೇ- ಲಾಠಿ ಏಟು ತಿಂದ ಗಾಯಾಳು ನಾಗಪ್ಪ.
ನಮ್ಮ ಸಮಾಜದ ಸ್ವಾಮೀಜಿಗಳ ನೇತೃತ್ವದಲ್ಲಿ ಪಂಚಮಸಾಲಿ 2ಎ ಮೀಸಲಾತಿಗಾಗಿ ನಾವು ಸುವರ್ಣಸೌಧದ ಎದುರು ಶಾಂತಿಯುತ ಹೋರಾಟ ಮಾಡುತ್ತಿದ್ವಿ, ಈ ವೇಳೆ ಬೆಳಗಾವಿ ಎಸ್ಪಯವರೇ ಲಾಠಿ ಚಾರ್ಜ್‌ಗೆ ಆರ್ಡರ್ ಮಾಡಿ ಲಾಠಿ ಚಾರ್ಜ್ ಮಾಡಿದ್ದರು. ಈ ಘಟನೆಯಲ್ಲಿ ಸ್ವಾಮೀಜಿಯವರ ರಕ್ಷಣೆ ಮಾಡಲು ಹೋಗಿ ನನಗೆ ತಲೆಗೆ ಏಟು ಬಿದ್ದು, ಮೂರು ಹೊಲಿಗೆ ಬಿದ್ದಿದೆ ಎಂದು ಲಾಠಿ ಎಟ್ಟಿನಿಂದ ಗಾಯಗೊಂಡ ಧಾರವಾಡ ಮೂಲದ ನಾಗಪ್ಪ ಹೇಳಿದರು.
ಲಾಠಿ ಏಟ್ಟಿನಿಂದ ತಲೆಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಧಾರವಾಡಗೆ ಮರಳಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಂಚಮಸಾಲಿ ಮೀಸಲಾತಿಗಾಗಿ ಸುವರ್ಣಸೌಧದ ಎದುರು ಶಾಂತಿಯುತ ಹೋರಾಟ ಮಾಡುತ್ತಿದ್ದೇವು. ಸ್ಥ
ಳಕ್ಕೆ ಸಿಎಂ ಬರುವಂತೆ ಪಟ್ಟು ಹಿಡಿದ ಸ್ವಾಮೀಜಿಯಿಂದ ರಸ್ತೆ ತಡೆಗೆ ಕರೆ ನೀಡಿದರು. ಈ ಹಿನ್ನೆಲೆ ಬೆಳಗಾವಿಯ ಸುವರ್ಣ ಸೌಧ ಎದುರಿನ ರಸ್ತೆ ತಡೆದು ಪ್ರತಿಭಟನೆ ನಡೆಸಿದಲಾಗುತಿತ್ತು.
ಈ ವೇಳೆ ಏಕಾಏಕಿ ಪೊಲೀಸರಿಂದ ಪ್ರತಿಭಟನಾನಿರತರ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ. ಈ ಸಮಯದಲ್ಲಿ ಸ್ವಾಮೀಜಿ ರಕ್ಷಣೆಗೆ ನಾನು ಮುಂದಾಗಿದೆ, ತಲೆಗೆ ಮತ್ತು ಕಾಲಿಗೆ ಲಾಠಿ ಏಟು ನೀಡಿದರು
. ಈ ವೇಳೆ ನನ್ನ ತಲೆಗೆ ಬೀಳುವ ಎಟು ನಾನು ರಕ್ಷಣೆಗೆ ಮುಂದಾಗದಿದ್ದರೆ, ಸ್ವಾಮೀಜಿಗೆ ಬೀಳುತಿತ್ತು. ನನ್ನ ತಲೆಯಿಂದ ರಕ್ತ ಬರುತ್ತಿರುವುದನ್ನು ನೋಎಇದ ಸ್ವಾಮೀಜಿಯವರು ಹಾಗೂ ಅಕ್ಕಪಕ್ಕದವರು ಆಸ್ಪತ್ರೆಗೆ ಕರೆದುಕೊಂಡು ಹೋದರು.
ನಮ್ಮದು ಶಾಂತಿಯುತ ಹೋರಾಟವಿತ್ತು. ಆದ್ರೆ ನಮ್ಮ ಹೋರಾಟದ ಮೇಲೆ ರಾಜಕೀಯ ದುರುದ್ದೇಶದಿಂದ ಲಾಠಿ ಪ್ರಹಾರ ಮಾಡಲಾಗಿದೆ.
ಲಕ್ಷಾಂತರ ಜನ ಇಂದಿನ ಹೋರಾಟದಲ್ಲಿ ಇಧದ ಸಮಯದಲ್ಲಿ ಪೊಲೀಸರು ಈ ರೀತಿ ನಡೆದುಕೊಳ್ಳಬಾರದಿತ್ತು.
ಮುಂದೆ ನಮ್ಮ ಹೋರಾಟ ತೀವ್ರಗೊಂಡು ಮನೆಗೆ ಹತ್ತು ಜನ ಸೇರಿ ಮೀಸಲಾತಿ ಪಡೆದು ತಿರುತ್ತೇವೆ, ನಮ್ಮ ಹೋರಾಟ ನಿಲ್ಲದು ಸ್ವಾಮೀಜಿಗಳ ನೇತೃದಲ್ಲಿಯೇ ಹೋರಾಡುತ್ತೇವೆ ಎಂದು ತಿಳಿಸಿದರು.