ಬೆಂಗಳೂರು, (ಡಿಸೆಂಬರ್ 08): ಕಾಂಗ್ರೆಸ್ ಪಡೆಗೆ ಚುಚ್ಚಲು ಬಿಜೆಪಿ ಅಸ್ತ್ರಗಳನ್ನು ರೆಡಿ ಮಾಡಿಕೊಂಡಿದೆ. ಮುಡಾ, ವಾಲ್ಮೀಕಿ, ವಕ್ಫ್, ಬಾಣಂತಿಯರ ಸಾವು ಪ್ರಕರಣ.
. ಹೀಗೆ ಒಂದಾಂದ ಮೇಲೆೊಂದು ಬಿಜೆಪಿ ಬಾಯಿಗೆ ಕೈ ಪಡೆಯೇ ಲಡ್ಡು ಕೊಟ್ಟಂತೆ ಕೊಟ್ಟಿದೆ. ಹೀಗಾಗಿ ಅಸ್ತ್ರಗಳನ್ನ ಪರಿಣಾಮಕಾರಿಯಾಗಿ ಬಳಸಿಕೊಂಡು ಕಾಂಗ್ರೆಸ್ ಮೇಲೆ ಮುಗಿಬೀಳಲು ಬಿಜೆಪಿ ಅಧಿವೇಶನಕ್ಕೆ ಸಜ್ಜಾಗಿದೆ. ಆದ್ರೆ, ಕೈ ಪಡೆ ನಾಯಕರು ಯತ್ನಾಳ್ ಬಣ ಹೋರಾಟವನ್ನ ಗುರಾಣಿಯಂತೆ ಪ್ರತ್ಯಸ್ತ್ರ ಮಾಡಿಕೊಂಡಿದೆ. ಹೀಗಾಗಿ ಕೈಪಡೆಗೆ ಅಸ್ತ್ರ ಸಿಗದಂತೆ ಮಾಡಲು ಕಮಲ ನಾಯಕರು ಯತ್ನಾಳ್‌ರನ್ನ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ
.ನಾಳೆಯಿಂದ ಅಂದರೆ ಡಿಸೆಂಬರ್ 09ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಬಿಸಿ ಏರಲಿದೆ. ಬಿಜೆಪಿ ಅಸ್ತ್ರಗಳಿಗೆ ಕೊರೊನಾಸ್ತ್ರ ರೆಡಿ ಮಾಡಿರೋ ಕಾಂಗ್ರೆಸ್, ಜೊತೆಗೆ ಯತ್ನಾಳ್ ಬಣ ಬಡಿದಾಟವನ್ನ ತಿರುಗುಬಾಣವಾಗಿ ಬಿಡಲು ಸಜ್ಜಾಗಿದೆ.
ಬಿಜೆಪಿ ವಕ್ಫ್ ವಿಚಾರ ಮುಂದಿಟ್ರೆ, ಯತ್ನಾಳ್ ಪ್ರತ್ಯೇಕ ಹೋರಾಟವನ್ನೇ ಪ್ರಸ್ತಾಪಿಸಿ ತಿವಿಯಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿದೆ. ಹೀಗಾಗಿ, ಎಚ್ಚರಿಕೆ ಹೆಜ್ಜೆ ಇಟ್ಟಿರುವ ಬಿಜೆಪಿ, ಯತ್ನಾಳ್‌ರನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಸದನದಲ್ಲಿ ಹೋರಾಡಲು ಕೌಂಟರ್ ಪ್ಲ್ಯಾನ್ ಮಾಡಿದೆ.