Breaking News

ಭಗವದ್ಗೀತೆ ಜಿಲ್ಲಾಮಟ್ಟದ ಸ್ಫರ್ಧೆಗಳು ಸಂಪನ್ನ…

Spread the love

ಬೆಳಗಾವಿ : ಭಗವದ್ಗೀತೆ ಅಭಿಯಾನದ ಜಿಲ್ಲಾ ಮಟ್ಟದ ಸ್ಫರ್ಧೆಗಳು ಮಂಗಳವಾರ ಆನಗೋಳದ ಸಂತಮೀರಾ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಭಗವದ್ಗೀತೆ ಅಭಿಯಾನ ಸಮಿತಿಯ ಕಾರ್ಯಾಧ್ಯಕ್ಷರೂ, ಸಂತ ಮೀರಾ ಶಾಲೆಯ ಅಧ್ಯಕ್ಷರೂ ಆಗಿರುವ ಪರಮೇಶ್ವರ ಹೆಗಡೆ ಮತ್ತು ಸಮಿತಿ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ ಸ್ಫರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.

ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ವಿದ್ಯಾರ್ಥಿಗಳು ಭಗವದ್ಗೀತೆಯ ವಿವಿಧ ವಿಭಾಗಗಳ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು. ಕಿಶೋರ ಮತ್ತು ಪ್ರೌಢ ಎನ್ನುವ ಎರಡು ವಿಭಾಗಗಳಲ್ಲಿ, ಭಾಷಣ ಸ್ಫರ್ಧೆ, ಕಂಠಪಾಠ ಸ್ಫರ್ಧೆ, ರಸಪ್ರಶ್ನೆ ಸ್ಫರ್ಧೆಗಳು ನಡೆದವು.

ಸ್ಫರ್ಧೆಯ ನಂತರ ವಿಜೇತರಿಗೆ ಪರಮೇಶ್ವರ ಹೆಗಡೆ, ಎಂ.ಕೆ.ಹೆಗಡೆ, ಸಂತಮೀರಾ ಶಾಲೆಯ ಆಡಳಿತಾಧಿಕಾರಿ ರಾಘವೇಂದ್ರ ಕುಲಕರ್ಣಿ ಬಹುಮಾನಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ವರ ಹೆಗಡೆ, ಭಗವದ್ಗೀತೆ ಭಗವಂತನಿಂದ ಬಂದ ಸಂದೇಶ. ಅದನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕೆನ್ನುವ ಕಾರಣದಿಂದ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಿಂದ ಕಳೆದ 18 ವರ್ಷಗಳಿಂದ ಭಗವದ್ಗೀತೆ ಅಭಿಯಾನ ನಡೆಸಲಾಗುತ್ತಿದೆ ಎಂದು ತಿಳಿಸಿದರು. ವಿದ್ಯಾ ಹೆಗಡೆ, ಶಾಂತಾ ಕಲ್ಲೂರಾಯ, ವಸುಮತಿ ಹೆಗಡೆ, ಸುಜಾತಾ ದಪ್ತಾರದಾರ್, ಶೋಭಾ ಹೆಗಡೆ, ಸಾವಿತ್ರಿ ಹೆಗಡೆ ನಿರ್ಣಾಯಕರಾಗಿ ಆಗಮಿಸಿದ್ದರು. ಶಾಲೆಯ ಮುಖ್ಯಾಧ್ಯಾಪಕಿ ಸುಜಾತಾ ದಪ್ತಾರದಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸರೋಜಾ ಕಟಗೇರಿ ಮತ್ತು ರೂಪಾ ಕುಮಟಾಕರ್ ಮತ್ತು ವೀಣಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.


Spread the love

About Laxminews 24x7

Check Also

ಎಟಿಎಂ ನಿಂದ ಹಣ ಕದ್ದ ವ್ಯಕ್ತಿಯನ್ನು ಬಂಧಿಸಿದ ಮಾರ್ಕೆಟ್ ಠಾಣೆ ಪೊಲೀಸರು

Spread the loveಬೆಳಗಾವಿ : ಎಟಿಎಂ ನಿಂದ ಹಣ ಕದ್ದ ವ್ಯಕ್ತಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಿನಾಂಕ: 30/11/2024 ರಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ