ಬಸವನಾಡು ವಿಜಯಪುರ ಜಿಲ್ಲೆ ಐತಿಹಾಸಿಕವಾಗಿ, ತೋಟಗಾರಿಕೆ ಬೆಳೆಗಳಿಗೆ ವಿಶ್ವ ವಿಖ್ಯಾತಿ ಪಡೆದಿದೆ. ಇದರೆಲ್ಲರ ನಡುವೆ ಇಲ್ಲಿಯ ಕೆಲ ಸಾಧಕರು ಸೈಕ್ಲಿಂಗ್, ಕ್ರಿಕೆಟ್ ಮತ್ತಿತರರ ವಿಭಾಗಗಳಲ್ಲಿ ಸಾಧನೆ ಮಾಡೋದರ ಜೊತೆಗೆ ಬಸವನಾಡಿಗೆ ಕೀರ್ತಿ ತಂದಿದ್ದಾರೆ. ಇದೀಗ ಜಿಲ್ಲೆಯ ಯುವತಿ ಯೊರ್ವಳು ಮಾಡಿದ ಸಾಧನೆ ವಿಜಯಪುರ ಜಿಲ್ಲೆಯ ಗರಿ ಹೆಚ್ಚಿಸಿದೆ. ಚಿಕ್ಕ ವಯಸ್ಸಿನಲ್ಲೇ ಅಭೂತಪೂರ್ವ ಯಶಸ್ಸು ಪಡೆದು ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ್ದಾಳೆ.
: ಸಾಧಿಸುವ ಛಲ, ಹಿಂದೆ ಪ್ರೋತ್ಸಾಹ ವಿದ್ದರೆ ಏನೆಲ್ಲಾ ಸಾಧಿಸಬಹುದು ಎನ್ನುವದಕ್ಕೆ ಯುವತಿಯೊಬ್ಬಳು ಸಾಕ್ಷಿಯಾಗಿದ್ದಾಳೆ. ವಿಜಯಪುರ ನಗರದ ಓರ್ವ ಯುವತಿ ಅತ್ಯಂತ ಚಿಕ್ಕ ವಯಸ್ಸಿನಲ್ಲೆ ಪೈಲಟ್ ಆಗಿದ್ದಾರೆ. ಈ ಮೂಲಕ ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.
ಉದ್ಯಮಿ ಅಮೀನ್ ಹುಲ್ಲೂರ್ ಅವರ ಪುತ್ರಿ 18 ವರ್ಷದ ಸಮೈರಾ ಹುಲ್ಲೂರ್ ಇದೀಗ ಕಮರ್ಷಿಯಲ್ ಪೈಲಟ್ ಲೈಸೆನ್ಸ್ (ಸಿಪಿಎಲ್) ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದ ಭಾರತದ ಅತ್ಯಂತ ಕಿರಿಯ ಪೈಲಟ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಸಮೀರಾ ಅವರು ಆರು ತಿಂಗಳ ಕಾಲ ವಾಯುಯಾನ ತರಬೇತಿಯನ್ನು ವಿನೋದ್ ಯಾದವ್ ಏವಿಯೇಷನ್ ಅಕಾಡೆಮಿಯಲ್ಲಿ ಪಡೆದರು.
ಅಕಾಡೆಮಿ ಸಂಸ್ಥಾಪಕರಾದ ವಿನೋದ್ ಯಾದವ್ ಮತ್ತು ಕ್ಯಾಪ್ಟನ್ ತಪೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮೊದಲ ಪ್ರಯತ್ನದಲ್ಲೇ ಎಲ್ಲ ಸಿಪಿಎಲ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ತರಬೇತಿ ಕಠಿಣವಾಗಿತ್ತು. ಆದರೆ, ಭೋದಕರ ನಿರಂತರ ಬೆಂಬಲದಿಂದ ಅದು ಸುಲಭವಾಯಿತು. ನನ್ನ ಸಾಧನೆಯ ಎಲ್ಲಾ ಶ್ರೇಯಸ್ಸು ಕ್ಯಾಪ್ಟನ್ ತಪೇಶ್ ಕುಮಾರ್ ಮತ್ತು ವಿನೋದ್ ಯಾವ್ ಅವರಿಗೆ ಸಲ್ಲುತ್ತದೆ” ಎನ್ನುತ್ತಾರೆ ಸಮೈರಾ.