Breaking News

ಧೈರ್ಯ ವಿದ್ದರೆ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಉದ್ಯಮಿ ಕಾಂಗ್ರೆಸ್ ಮುಖಂಡ ರವಿ ಕರಾಳೆ ಹೇಳಿದರು.

Spread the love

ಧೈರ್ಯ ವಿದ್ದರೆ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಉದ್ಯಮಿ ಕಾಂಗ್ರೆಸ್ ಮುಖಂಡ ರವಿ ಕರಾಳೆ ಹೇಳಿದರು.

ಅವರು ಇಂದು ಹುಕ್ಕೇರಿ ನಗರದ ಶ್ರೀ ಲಕ್ಷ್ಮಿ ಶಿಕ್ಷಣ ಸಂಸ್ಥೆಯ ಭರತೇಶ ಪ್ಯಾರಾಮೇಡಿಕಲ್ ಕಾಲೇಜು ನೂತನ ವಿದ್ಯಾಥಿಗಳಿಗೆ ಸ್ವಾಗತ ಹಾಗೂ ಅಂತಿಮ ವಿದ್ಯಾರ್ಥಿಗಳ ಬಿಳ್ಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾಲೇಜು ಆವರಣದಲ್ಲಿ ಜರುಗಿದ ಕಾರ್ಯಕ್ರಮವನ್ನು ಎಲಿಮುನ್ನೊಳ್ಳಿ ಪ್ರಾಥಮಿಕ ಸಹಕಾರಿ ಸಂಘದ ಅದ್ಯಕ್ಷ ಕೆಂಪಣ್ಣ ದೇಸಾಯಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಆಡಳಿತಾಧಿಕಾರಿ ಶ್ರೀಮತಿ ಶ್ರೀದೇವಿ ಹಿರೆಮಠ ಗಣ್ಯರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ವೇದಿಕೆ ಮೇಲೆ ಪುರಸಭೆ ಅದ್ಯಕ್ಷ ಇಮ್ರಾನ ಮೋಮಿನ, ಬದುಬನ ಸಂಸ್ಥೆಯ ಸದಸ್ಯ ವಿಫುಲ ಬಾಳಿಕಾಯಿ, ಮಹೇಂದ್ರ ಮಲಗೌಡನವರ, ಡಾ, ಭರತೇಶ ಸಪ್ತಸಾಗರ, ಶ್ರೀಮತಿ ಅವಕ್ಕಾ ಮಲಗೌಡನವರ, ಪ್ರಾಂಶುಪಾಲ ಮಿಲಿಂದ ನಾಡಗೌಡ ಉಪಸ್ಥಿತರಿದ್ದರು.

ನಂತರ ಮಾತನಾಡಿದ ಇನ್ ನ್ಯೂಜ ವರದಿಗಾರ ರಾಜು ಬಾಗಲಕೋಟಿ ವಿದ್ಯಾರ್ಥಿಗಳು ಕೌಶಲ್ಯ ಆಧಾರಿತ ಕೋರ್ಸಗಳನ್ನು ಶ್ರಮ ಪಟ್ಟು ವಿದ್ಯಾಭ್ಯಾಸ ಮಾಡಿದರೆ ಇಡಿ ಜೀವನ ಪರ್ಯಂತ ಸಮಾಜಮುಖಿಯಾಗಿ ಕಾರ್ಯಮಾಡುತ್ತಾ ಆರ್ಥಿಕವಾಗಿ ಸಭಲರಾಗಬಹುದು ಅದೆ ರೀತಿ ತಾವು ಕಲಿತ ಶಾಲೆಯ ಋಣ ತಿರಿಸುವದು ಪ್ರತಿಯೊಬ್ಬ ಯಶಸ್ವಿ ಮನುಷ್ಯನ ಕರ್ತವ್ಯ ವಾಗಿದೆ ಎಂದರು ( )
ನಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕರಿಸಿ ಅಭಿನಂದಿಸಲಾಯಿತು.

ಉದ್ಯಮಿ ರವಿ ಕರಾಳೆ ಮಾತನಾಡಿ ಹುಕ್ಕೇರಿ ನಗರದಲ್ಲಿ ಪ್ರಥಮ ಬಾರಿಗೆ ವೈದ್ಯಕೀಯ ಶಿಕ್ಷಣವನ್ನು ಪರಿಚಯಿಸಿದ ಮಲಗೌಡನವರ ಅವರ ಧೈರ್ಯ ಮೆಚ್ಚುವಂತಾಗಿದೆ ಅವರ ಈ ಕಾರ್ಯಕ್ಕೆ ಈ ಭಾಗದ ವಿದ್ಯಾರ್ಥಿಗಳಿಗೆ ಅನಕೂಲವಾಗಿದೆ ಎಂದರು

ಸಂಸ್ಥೆಯ ಅದ್ಯಕ್ಷ ಕೆ ಬಿ ಮಲಗೌಡನವರ ಮಾತನಾಡಿ ಸಂಸ್ಥೆಗಳು ನಡೆಯಬೇಕಾದರೆ ಎಲ್ಲರ ಸಹಾಯ ಸಹಕಾರ ಅಗತ್ಯವಾಗಿರಬೇಕು ಈ ಸಂಸ್ಥಯಲ್ಲಿ ಪ್ರವೇಶ ಪಡೆದ ಪ್ರತಿಯೊಬ್ಬರು ನಮ್ಮ ಸಂಸ್ಥೆ ಎಂಬ ಮನೊಭಾವದಿಂದ ಇದ್ದರೆ ಮಾತ್ರ ವಿದ್ಯಾಸಂಸ್ಥೆ ಗಳು ಬೆಳೆಯಲು ಸಾಧ್ಯವಾಗುತ್ತದೆ ಎಂದರು

ಈ ಸಂದರ್ಭದಲ್ಲಿ ಭರತೇಶ ಪ್ಯಾರಮೇಡಿಕಲ್ ಸಂಸ್ಥೆಯ ಪ್ರಾದ್ಯಾಪಕರು,ವಿದ್ಯಾರ್ಥಿಗಳು ಹೇಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಆರೋಗ್ಯ ಮತ್ತು ಫಿಟ್ನೆಸ್ ಕಡೆ ಗಮನ ಹರಿಸಿದರೆ ಜೀವನದಲ್ಲಿ ಸದಾಕಾಲ ಸಂತೋಷದಿಂದ ಇರಬಹುದು ಎಂದು ಮೈಸೂರಿನಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೇಳಿದರು.

Spread the loveಮೈಸೂರು: ಜೀವನದಲ್ಲಿ ಸಂಪಾದನೆ ಮುಖ್ಯ. ಅದರೆ ಜೊತೆಯಲ್ಲಿ ನೆಮ್ಮದಿಯಾಗಿರಲು ಆರೋಗ್ಯವನ್ನೂ ಸಂಪಾದಿಸಬೇಕು ಎಂದು ಬಾಲಿವುಡ್ ನಟಿ ಶಿಲ್ಪ ಶೆಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ