ಶಾಸಕ ಯತ್ನಾಳರ ಹೇಳಿಕೆ ಶರಣರಿಗೆ ಮಾಡಿದ ಅಪಮಾನ ತಕ್ಷಣ ಕ್ಷಮೆ ಕೇಳಲು ಸಚಿವ ಎಂ.ಬಿ.ಪಾಟೀಲ ಆಗ್ರಹ
ವಿಶ್ವ ಗುರು ಬಸವಣ್ಣನವರ ಕುರಿತು ಶಾಸಕ ಯತ್ನಾಳ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಯತ್ನಾಳ ತಕ್ಷಣ ಕ್ಷಮೆ ಕೋರಬೇಕೆಂದು ಸಚಿವ ಎಂ.ಬಿ.ಪಾಟೀಲ ಆಗ್ರಹಿಸಿದ್ದಾರೆ. ತಮ್ಮ ಸೊಶಿಯಲ್ ಮಿಡಿಯಾದಲ್ಲಿ ಪೊಸ್ಟ್ ಹಾಕಿರುವ ಸಚಿವ ಎಂ.ಬಿ.ಪಾಟೀಲ ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ ಅವರು ವಿಶ್ವಗುರು
ಬಸವಣ್ಣನವರ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡನೀಯ. ಬಸವಣ್ಣ ನಮ್ಮ ಅಸ್ಮಿತೆ, ನಮ್ಮ ಪ್ರೇರಕ ಶಕ್ತಿ. ಸತ್ಯವು ಎಲ್ಲರಿಗೂ ತಿಳಿದಿರುವಾಗ ಅವರ ಸುಳ್ಳಿಗೆ ಕಿಮ್ಮತ್ತಿಲ್ಲ.
ಯತ್ನಾಳರ ಹೇಳಿಕೆ ಶರಣರಿಗೆ ಮಾಡಿದ ಅಪಮಾನ ತಕ್ಷಣ ಅವರು ಕ್ಷಮೆ ಕೋರಬೇಕೆಂದು ಒತ್ತಾಯಿಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಟ್ಯಾಗ್ ಮಾಡಿದ ಪೊಸ್ಟ್ ಮೂಲಕ ಆಗ್ರಹಿಸಿದ್ದಾರೆ.
Laxmi News 24×7