Breaking News

ಎಟಿಎಂ ನಿಂದ ಹಣ ಕದ್ದ ವ್ಯಕ್ತಿಯನ್ನು ಬಂಧಿಸಿದ ಮಾರ್ಕೆಟ್ ಠಾಣೆ ಪೊಲೀಸರು

Spread the love

ಬೆಳಗಾವಿ : ಎಟಿಎಂ ನಿಂದ ಹಣ ಕದ್ದ ವ್ಯಕ್ತಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ: 30/11/2024 ರಂದು ಬೆಳಗಾವಿ ನಗರದ ಮಾರ್ಕೇಟ್ ಪೊಲೀಸ್ ಠಾಣೆಯ ವ್ಯಾಪ್ತಿಯ ಬೆಳಗಾವಿ ಅಂಜುಮನ್ ಬಿಲ್ಡಿಂಗ್‌ ನಲ್ಲಿ ಬರುವ ಹೆಚ್.ಡಿ.ಎಫ್.ಸಿ, ಬ್ಯಾಂಕ ಎ.ಟಿ.ಎಮ್ ನಿಂದ 8,65.500 ರೂ. ವನ್ನು “ಎಸ್.ಐ.ಎಸ್” ಪ್ರೋಸಿಗರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್” ಕಂಪನಿಯಲ್ಲಿ ಕೆಲಸ ಮಾಡುವ ಕೆಲಸಗಾರನಾದ ಕೃಷ್ಣಾ ಸುರೇಶ ದೇಸಾಯಿ, (ವಯಸ್ಸು: 23 ವರ್ಷ, ಸಾ: ಮನೆ ನಂ: 429, ಜ್ಯೋತಿ ನಗರ, ಕಂಗ್ರಾಳಿ ಕೆ.ಹೆಚ್. ಬೆಳಗಾವಿ ನಗರ) ಕಳ್ಳತನ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು.

.ಟಿ.ಎಮ್ ಕಾಂಬಿನೇಶನ ಪಾಸ್‌ವರ್ಡವನ್ನು ಉಪಯೋಗಿಸಿ ಹೆಚ್.ಡಿ.ಎಫ್.ಸಿ, ಎ.ಟಿ.ಎಮ್.ದಿಂದ ಹಣವನ್ನು ತೆಗೆದುಕೊಂಡು ಹೋದ ಬಗ್ಗೆ ಮಾರ್ಕೇಟ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 164/2024 ಕಲಂ: 306 ಬಿ.ಎನ್.ಎಸ್.- 2023 (ಹಳೆ ಕಲಂ: 381 ಐಪಿಸಿ) ನೇ ಪ್ರಕಾರ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.

ಸಂತೋಷ ಸತ್ಯನಾಯಕ, ಎಸಿಪಿ, ಮಾರ್ಕೇಟ್ ಉಪವಿಭಾಗರವರ ಮಾರ್ಗದರ್ಶನದಲ್ಲಿ ಮಹಾಂತೇಶ ಧಾಮಣ್ಣವರ, ಪಿಐ, ಮಾರ್ಕೆಟ್ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ತಂಡ ಮಹಾಂತೇಶ ಮಠಪತಿ-ಪಿ.ಎಸ್.ಐ., ವಿಠಲ ಹಾವನ್ನವರ-ಪಿ.ಎಸ್.ಐ., ಹೆಚ್.ಎಲ್.ಕೆರೂರ-ಪಿ.ಎಸ್.ಐ, ಹಾಗೂ ಸಿಹೆಚ್.ಸಿ, ರವರುಗಳಾದ ಲಕ್ಷ್ಮಣ ಎಸ್.ಕಡೋಲ್ಕರ, ಶಂಕರ ಕುಗಟೊಳ್ಳಿ, ಐ.ಎಸ್.ಪಾಟೀಲ್, ನವೀನಕುಮಾರ, ಶಿವಪ್ಪ ತೇಲಿ, ರಮೇಶ ಅಕ್ಕಿ, ಹಾಗೂ ಸಿಪಿಸಿ ರವರುಗಳಾದ ಸುರೇಶ ಕಾಂಬಳೆ, ಕಾರ್ತಿಕ, ಎಮ್.ಬಿ.ವಡೆಯರ್, ಮಹಾದೇವ ಕಾಶೀದ, ಸಂಜು ಸಂಗೋಟಿ ಹೀಗೆ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಪತ್ತೆ ಕಾರ್ಯವನ್ನು ಕೈಗೊಂಡು ಆರೋಪಿತನಿಂದ ಎ.ಟಿ.ಎಮ್ ನಿಂದ ಹಣ ಕಳ್ಳತನವಾದ 5,74,000/-ರೂ. ಹಣ, ಕಳ್ಳತನ ಹಣದಿಂದ ಖರೀದಿ ಮಾಡಿದ ಬಂಗಾರದ ಆಭರಣ 1,56,000/-ರೂ ಮೌಲ್ಯದ ತೂಕ 20 ಗ್ರಾಂ, ಹೀಗೆ ಒಟ್ಟು 7.30.000/-ರೂ. ಕಿಮ್ಮತ್ತಿನ ಹಣ ಮತ್ತು ಬಂಗಾರದ ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ.


Spread the love

About Laxminews 24x7

Check Also

ಅತೀ ಶೀಘ್ರದಲ್ಲೇ ನಾವು ಬರ್ತಿದ್ದೇವೆ ಎಂದ ಆಪಲ್​!

Spread the love Bengaluru: ಇನ್ನು ಕೆಲವೇ ದಿನಗಳಲ್ಲಿ ಐಫೋನ್​ 17 ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದಕ್ಕೂ ಮುನ್ನ ಆಪಲ್​ ಕರ್ನಾಟಕ ರಾಜ್ಯಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ