ಗುಂಡಿ ಮುಕ್ತ ರಸ್ತೆ ಸೇರಿ ಹಾಗೂ ಆರ್‌ಟಿಓ ಕಚೇರಿಯಲ್ಲಿನ ಭ್ರಷ್ಟಾಚಾರ ವಿರುದ್ಧ ಅಟೋ ಚಾಲಕರ ಆಕ್ರೋಶ…ಡಿಸಿ ಕಚೇರಿ ಮುಂಭಾಗ ಪ್ರೊಟೆಸ್ಟ್ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ
ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿನ ರಸ್ತೆ ಗುಂಡಿಗಳ ಮುಚ್ಚಲು ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ನಡೆ ಖಂಡಿಸಿ ಹಾಗೂ ಧಾರವಾಡ ಆರ್ ಟಿ ಓ ಕಚೇರಿಯಲ್ಲಿ ಎಜೆಂಟರ್ ಮೂಲಕ ಭ್ರಷ್ಟಾಚಾರ ಮಾಡುತ್ತಿರುವ ಅಧಿಕಾರಿಗಳ ಕಾರ್ಯವೈಖರಿ ವಿರೋಧಿಸಿ, ಧಾರವಾಡದಲ್ಲಿಂದು ಅಟೋ ಚಾಲಕರು ಕಮ್ ಮಾಲೀಕರು ಪ್ರತಿಭಟನೆ ನಡೆಸಿ ಸರ್ಕಾರ ಸೇರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವೈ- ಉತ್ತರ ಕರ್ನಾಟಕ ಅಟೋ ರಿಕ್ಷಾ ಚಾಲಕರ ಸಂಘ, ಧಾರವಾಡ ಜಿಲ್ಲಾ ಅಟೋ ಚಾಲಕರ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಮುಂಭಾಗದಲ್ಲಿ ಪ್ರತಿಭಟನೆ ನಡಸಿದ ರಿಕ್ಷಾ ಚಾಲಕರು ಕಮ್ ಮಾಲೀಕರು ಸರ್ಕಾರದ ವಿರುದ್ಧ ಹಾಗೂ ಅರ್‌ಟಿಓ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಅಸಮಧಾನ ಹೊರಹಾಕಿದರು. ಹುಬ್ಬಳ್ಳಿ ಧಾರವಾಡ ಅವಳಿನಗರದ ಪ್ರಮುಖ ರಸ್ತೆಗಳ ಸಿಂಗಾರ ಮಾಡಲಾಗುತ್ತಿದೆ.
ಆದರೆ ನಗರಗಳ ಒಳ ರಸ್ತೆಯಲ್ಲಿ ಗುಂಡಿಗಳ ಬಿದ್ದು ಹೊಂಡಗಳಾಗುತ್ತಿವೆ. ಜಿಲ್ಲಾಡಳಿತ, ಉಸ್ತುವಾರಿ ಸಚಿವ ಸಂತೋಷ ಲಾಡ್, ಮಹಾನಗರ ಪಾಲಿಕೆ ಗುಂಡಿ ಮುಚ್ಚುವ ಗೋಜಿಗೆ ಹೋಗುತ್ತಿಲ್ಲ.
ಇದರಿಂದಾಗಿ ಸಾರ್ವಜನಿಕರಿಗೂ ಸೇರಿದಂತೆ ಅಟೋ ಚಾಲಕರು ಸಂಕಷ್ಟ ಎದರಿಸಬೇಕಾಗಿದೆ. ಜತೆಗೆ ಆರ್‌ಟಿಓ ಕಚೇರಿಯಲ್ಲಿ ಇತ್ತಿಚ್ಚಿಗೆ ಏಜೆಂಟ್ ಮೂಲಕ ಭ್ರಷ್ಟಾಚಾರ ಮೀತಿ ಮೀರಿದೆ ಇದಕ್ಕೆ ಈ ಕೂಡಲೇ ಉಸ್ತುವಾರಿ ಸಚಿವರು ಹಾಗೂ ಸಾರಿಗೆ ಮಂತ್ರಿಗಳು ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ನಮ್ಮ ಈ ಹೋರಾಟಕ್ಕೆ ಅಧಿಕಾರಿಗಳ ಜನಪ್ರತಿನಿಧಿಗಳು ಸ್ಪಂದನೆ ಮಾಡದಿದ್ದರೆ ಉಗ್ರವಾದ ಹೋರಾಟ ಹಮ್ಮಿಕೊಳ್ಳುವುದಾಗಿ ಖಡಕ್‌ಎಚ್ಚರಿಕೆ ನೀಡಿದರು.