ಬೆಳಗಾವಿಯ ಜಿಲ್ಲಾ ರೋಲರ್ ಸ್ಕೆಟಿಂಗ್ ಅಸೋಸಿಯೇಷನ ಮತ್ತು ಏಂಜಲ್ ಫೌಂಡೇಶನ ಗ್ರಾಮೀಣ ವಿಕಾಸ್ ಮತ್ತು ಶಿಕ್ಷಣ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಸ್ಕೆಟಿಂಗ್ ಸ್ಪರ್ಧೆ ಉತ್ಸಾಹದಲ್ಲಿ ನಡೆಯಿತು.
ಏಂಜಲ್ ಫೌಂಡೇಶನ ಗ್ರಾಮೀಣ ವಿಕಾಸ್ ಮತ್ತು ಶಿಕ್ಷಣ ಸಂಸ್ಥೆಯ ಸಂಸ್ಥಾಪಕಿ ಮೀನಾ ಬೆನಕೆ ಅವರು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಈ ವೇಳೆ ಉಪಾಧ್ಯಕ್ಷ ದೀಪಕ್ ಸುತಾರ್, ತರಬೇತಿದಾರ ಸೂರ್ಯಕಾಂತ್ ಹಿಂಡಲಗೆಕರ, ಏಂಜಲ್ ಬೆನಕೆ, ಅಲಿಷ್ಕ ಬೆನಕೆ, ಇನ್ನುಳಿದವರು ಭಾಜಿಯಾಗಿದ್ದರು.
ಅದರಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಸ್ಕೆಟಿಂಗ್ ಪಟುಗಳನ್ನು ಸನ್ಮಾನಿಸಲಾಯಿತು.