ಬೆಳಗಾವಿಯಲ್ಲಿ ಟ್ರೇಡಿಂಗ್ ಪಾಯಿಂಟ್ ಶಾಖೆ ಆರಂಭಸಂಸ್ಥಾಪಕ ಮತ್ತು ಸಿಇಓ ಮೊಹಸಿನ್ ಮನೇರ್ ಉದ್ಘಾಟನೆ
ಮನೆಯಲ್ಲೇ ಕುಳಿತು ಹಣ ಸಂಪಾದಿಸಿಬೆಳಗಾವಿಗರಿಗೆ ಸಿಗಲಿದೆ ಟ್ರೇಡಿಂಗ್ ಕುರಿತು ಮಾರ್ಗದರ್ಶನ
ಇಂದಿನ ತುಟ್ಟಿಯ ಕಾಲದಲ್ಲಿ ಟ್ರೇಡಿಂಗ್ ಮತ್ತು ಸ್ಟಾಕ್ ಮಾರ್ಕೆಟ್ ನ ಮಾಹಿತಿ ಎಲ್ಲರಿಗೂ ತಿಳಿದಿರಲೇಬೇಕು. ಇದಕ್ಕಾಗಿ ಟ್ರೇಡಿಂಗ್ ಪಾಯಿಂಟ್ ನ ವತಿಯಿಂದ ದೇಶದಲ್ಲಿ ವಿವಿಧಡೆ ಶಾಖೆಗಳನ್ನು ಆರಂಭಿಸಿ ಎಲ್ಲ ವರ್ಗದ ಜನರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಸಂಸ್ಥಾಪಕ ಹಾಗೂ ಸಿಇಓ ಮೋಸಿನ್ ಮನೇರ್ ಹೇಳಿದರು.
ಟ್ರೇಡಿಂಗ್ ಎಲ್ಲ ದೇಶಗಳಲ್ಲಿ ಇತ್ತೀಚೆಗೆ ತನ್ನ ವ್ಯಾಪ್ತಿಯನ್ನ ಹೆಚ್ಚಾಗಿಸಿದೆ. ಇದಕ್ಕಾಗಿ ಯೋಗ್ಯ ಮಾಹಿತಿ ಮತ್ತು ಹೇಗೆ ಅದನ್ನು ಉಪಯೋಗಿಸಬೇಕು ಎಂಬುದು ತಿಳಿದಿರಬೇಕಾಗುತ್ತದೆ. ಮನೆಯಲ್ಲಿಯೇ ಕುಳಿತು ಹಣ ಸಂಪಾದಿಸಲು ಇದು ಅತಿ ಸರಳ ವಿಧಾನವಾಗಿದೆ. ಬೆಳಗಾವಿಯ ನೆಹರು ನಗರದಲ್ಲಿರುವ ಸಿಟಿ ಪ್ಲಾಜಾದಲ್ಲಿ ಟ್ರೇಡಿಂಗ್ ಪಾಯಿಂಟ್ ಅನ್ನ ಆರಂಭಿಸಲಾಗಿದೆ. ಇದರ ಸಂಸ್ಥಾಪಕ ಮೋಹಸಿನ್ ಮನೆ ಇದನ್ನ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ನಾವು 10 12 ವರ್ಷಗಳಿಂದ ಶೇರ್ ಮಾರ್ಕೆಟ್ ವ್ಯವಸಾಯವನ್ನ ಮಾಡುತ್ತಿದ್ದೇವೆ. ದೇಶದೆಲ್ಲೆಡೆ 42ಕ್ಕೂ ಅಧಿಕ ಶಾಖೆಗಳನ್ನು ಹೊಂದಿದ್ದೇವೆ. ವಿವಿಧ ರಾಜ್ಯಗಳಲ್ಲಿ ನಾವು ಕಾರ್ಯನಿರ್ವಹಿಸುತ್ತೇವೆ. ಶೇರ್ ಮಾರ್ಕೆಟ್ ಟ್ರೇಡಿಂಗ್ ಕ್ಲಾಸೆಸ್ ಗಾಗಿ ನಮ್ಮ ಬಳಿ ತಜ್ಞ ಮಾರ್ಗದರ್ಶಕರಿದ್ದಾರೆ.
ಇದರಲ್ಲಿ ಇಕ್ವಿಟಿ ಮಾರ್ಕೆಟ್ ಕಮೋಡಿಕ್ ಮಾರ್ಕೆಟ್ forx ಮಾರ್ಕೆಟ್ ಕರೆನ್ಸಿ ಮಾರ್ಕೆಟ್, ಇನ್ವೆಸ್ಟ್ಮೆಂಟ್ ಇಂಟ್ರಾ ಡೇ, ಲಾಂಗ್ ಟರ್ನ್ ಶಾರ್ಟ ಟರ್ಮ್ ಇನ್ವೆಸ್ಟ್ಮೆಂಟ್, ಹೆಲ್ತ್ ಇನ್ಸೂರೆನ್ಸ್ ಮನಿ ಮ್ಯಾನೇಜ್ಮೆಂಟ್ ಸೇರಿದಂತೆ ಉಚಿತ ಡಿಮ್ಯಾಟ್ ಖಾತೆ ಆರಂಭಿಸುವುದು ಎಲ್ಲ ಮಾಹಿತಿಯನ್ನ ಎರಡು ತಿಂಗಳ ಕೋರ್ಸಿನಲ್ಲಿ ನೀಡಲಾಗುವುದು. ನಿಮಗಿಲ್ಲಿ ಹೆಚ್ಚಿನ ಲಾಭ ಸಿಗಲಿದೆ. ಸದ್ಯ ಶೇರ್ ಮಾರ್ಕೆಟ್ ನಲ್ಲಿ ಏನು ನಡೆದಿದೆ ಮಾರ್ಕೆಟ್ ನ ಎತ್ತರ ಇಳಿತಗಳೇನು ಎಂಬ ಮಾಹಿತಿಯನ್ನು ನಾವು ನೀಡಲಿದ್ದೇವೆ ಎಂದರು.
ಈ ವೇಳೆ ಬೆಳಗಾವಿ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯ ಜನರು ಭಾಗಿಯಾಗಿದ್ದರು.