ಮಾಯಾ ಗ್ಯಾಂಗ್ ಹೆಸರು ಕೇಳಿದ್ರೆ ಸಾಕು ಮಂಗಳೂರಿನ ಪೊಲೀಸರು ಅಲರ್ಟ್ ಆಗಿ ಬಿಡ್ತಾರೇ..ಈ ಗ್ಯಾಂಗ್ ಟಾರ್ಗೆಟ್ ಪೊಲೀಸರು…ಒಂಟಿಯಾಗಿ ಕರ್ತವ್ಯ ನಿರ್ವಹಿಸುವ ಪೊಲೀಸರನ್ನೇ ಟಾರ್ಗೆಟ್ ಮಾಡಿ ಅವರ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿ ಕ್ಷಣಾರ್ಧದಲ್ಲಿ ಈ ಗ್ಯಾಂಗ್ ಪರಾರಿಯಾಗತ್ತೆ. ಸಿಎ ಮತ್ತು ಎನ್ ಆರ್ ಸಿ ಉಗ್ರ ಹೋರಾಟದ ವೇಳೆಯಲ್ಲಿ ಈ ಗ್ಯಾಂಗ್ ಈ ಮತ್ತೆ ಮುನ್ನಲೆಗೆ ಬಂದಿದೆ. ಈ ಬೆನ್ನಲ್ಲೇ ಫುಲ್ ಅಲರ್ಟ್ ಆಗಿರುವ ಹುಬ್ಬಳ್ಳಿ ಧಾರವಾಡ ಪೊಲೀಸರು, ಈ ಗ್ಯಾಂಗ್ ಬೆನ್ನು ಬಿದ್ದಿದ್ದಾರೆ..
ಹುಬ್ಬಳ್ಳಿ ನಗರದಲ್ಲಿ ನಡೆದಿದ್ದ ದರೋಡೆ ಪ್ರಕರಣದ ಆರೋಪಿಗಳನ್ನು ಬಂಧನ ಮಾಡಿ ಸ್ಥಳ ಪಂಚನಾಮೆ ಮಾಡುವ ವೇಳೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿ ಕೊಳ್ಳಲು ಯತ್ನಿಸಿದ ನಟೋರಿಯಸ್ ದರೊಡೆಕೋರರ ಮೇಲೆ ಸಿಸಿಬಿ ಪೊಲೀಸರು ಫೈರಿಂಗ್ ಮಾಡಲಾಗಿತ್ತು.ಸದ್ಯ ಸಿಸಿಬಿ ಪೊಲೀಸರಿಂದ ಗುಂಡೇಟು ತಿಂದ ಈ ಇಬ್ಬರ ಪೈಕಿ ಪಾರೂಕ್ ತುಂಬಾ ನಟೋರಿಯಸ್ ಆಗಿದ್ದು ಈತ ಕರಾವಳಿ ಭಾಗದ ಮಾಯಾ ಗ್ಯಾಂಗ್’ಜೊತೆ ಒಡನಾಟ ಹೊಂದಿರುವ ಅನುಮಾನ ಮೂಡಿದೆ.ಮಾಯಾ ಗ್ಯಾಂಗ್ ಹೆಸರು ಕೇಳಿದ್ರೆ ಸಾಕು ಮಂಗಳೂರಿನ ಪೊಲೀಸರು ಅಲರ್ಟ್ ಆಗಿ ಬಿಡ್ತಾರೇ.. ಯಾಕಂದ್ರೆ ಇವರೇ ಟಾರ್ಗೆಟ್ ಪೊಲೀಸರೇ,ಒಂಟಿಯಾಗಿ ಕರ್ತವ್ಯ ನಿರ್ವಹಿಸುವ ಪೊಲೀಸರನ್ನೇ ಟಾರ್ಗೆಟ್ ಮಾಡಿ ಅವರ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿ ಕ್ಷಣಾರ್ಧದಲ್ಲಿ ಈ ಗ್ಯಾಂಗ್ ಪರಾರಿಯಾಗತ್ತೆ.
ಈ ಮಾಯಾ ಗ್ಯಾಂಗ್ ಹುಟ್ಟಿಕೊಂಡಿದ್ದು, ಸಿಎ ಮತ್ತು ಎನ್ ಆರ್ ಸಿ ಉಗ್ರ ಹೋರಾಟದ ವೇಳೆಯಲ್ಲಿ.. ಪಿಎಫ್ ಐ ಜೊತೆಗೆ ನೇರ ನಂಟು ಹೊಂದಿದ್ದ ಈ ಗ್ಯಾಂಗ್ ಮೂಲ ಅಜೆಂಡಾವೇ ಪೊಲೀಸರ ಮೇಲೆ ಅಟ್ಯಾಕ್ ಮಾಡಿ ಪೊಲೀಸರನ್ನು ಮಾನಸಿಕವಾಗಿ ಕುಗ್ಗಿಸಿ, ಇಲಾಖೆ ತಲೆತಗ್ಗಿಸುವಂಯತೆ ಮಾಡ ಮಾಡುವುದು. ಇದಕ್ಕೆ ಮೂಲ ಕಾರಣ 2019 ರಲ್ಲಿ ಮಂಗಳೂರಿನಲ್ಲಿ CA NRC ಪ್ರತಿಭಟನೆ ಅತಿರೇಕಕ್ಕೆ ಹೋಗಿ ಹಿಂಸಾಚಾರಕ್ಕೆ ಹೋದಾಗ ಪೊಲೀಸರು ಗೋಲಿಬಾರ್ ಮಾಡಿದಾಗ ಇಬ್ಬರು ಇಬ್ಬರು ಹೋರಾಟಗಾರರು ಸಾವನಪ್ಪಿದ್ದರು. ಹೀಗಾಗಿ ಪೊಲೀಸರ ಮೇಲೆ ಸೇಡು ತೀರಿಸಿಕೊಳ್ಳಲು ಹುಟ್ಟಿದ್ದೇ ಈ ಮಾಯಾ ಗ್ಯಾಂಗ್.ಈ ಗ್ಯಾಂಗ್ ನಲ್ಲಿ ಸಾಕಷ್ಟು ನಟೋರಿಯಸ್ ರೌಡಿಗಳು,ದರೊಡೆಕೋರರನ್ನು ಹೊಂದಿದೆ.. ಪಾರೂಕ್ ಅಲಿಯಾಸ್ ಟೊಮೆಟೊ ಪಾರೂಕ್ ಮಾಯಾ ಗ್ಯಾಂಗ್’ನ ಸದಸ್ಯರ ಜೊತೆ ಟಚ್ ನಲ್ಲಿದ್ದ ಎಂಬ ಅನುಮಾನ ಇದೀಗ ಮೂಡಿದೆ.
: