ಬೆಳಗಾವಿ, (ಡಿಸೆಂಬರ್ 01): ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಬಣ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ಯತ್ನಾಳ್ ತಂಡದ ವಿರುದ್ಧ ಶಿಸ್ತು ಕ್ರಮ ಜರುಗಿಸವಂತೆ ಹೈಕಮಾಂಡ್ಗೆ ಒತ್ತಾಯಿಸಲು ತೀರ್ಮಾನಿಸಿದೆ.
ವಕ್ಫ್ ವಿಚಾರ ಇಟ್ಟುಕೊಂಡೇ ವಿಜಯೇಂದ್ರ ವಿರುದ್ಧ ರಣಕಹಳೆ ಮೊಳಗಿಸಿರುವ ಯತ್ನಾಳ್ ತಂಡ, ಇದೀಗ ದಾವಣಗೆರೆ ಸಮಾವೇಶಕ್ಕೆ ತಿರುಗೇಟು ನೀಡಲು ತಯಾರಾಗಿದೆ.
ಹೌಡು…ಅದೇ ದಾವಣಗೆರೆಯಲ್ಲಿ ಹಿಂದೂಗಳು ಸಮಾವೇಶ ಮಾಡಲು ಮುಂದಾಗಿದೆ. ಇದರೊಂದಿಗೆ ಮತ್ತಷ್ಟು ಬಣ ಸಂಘರ್ಷ ತೀವ್ರಗೊಳ್ಳುವ ಸಾಧ್ಯತೆಗಳಿವೆ.
ಬೆಳಗಾವಿಯಲ್ಲಿ ಮಾತನಾಡಿದ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಮ್ಮನ್ನ ಅಪರೇಷನ್ ಮಾಡಿದ್ರೆ ನಿಮ್ಮನ್ನ ಕಟ್ ಮಾಡುತ್ತೇವೆ.
ದಾವಣಗೆರೆಯಲ್ಲಿ ನಾವು ಹಿಂದೂಗಳು ಸಮಾವೇಶ ಮಾಡುತ್ತೇವೆ. ಯಾರೂ ಮಾಡಿರದ ಸಮಾವೇಶವನ್ನು ಮಾಡಿ ತೋರಿಸುತ್ತೇವೆ.
25 ಲಕ್ಷ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುವ ಯೋಜನೆ ಇದ್ದು, ಕಾರ್ಯಕ್ರಮಕ್ಕೆ ಬೆಳಗಾವಿಯಿಂದ ಒಂದು ಲಕ್ಷ ಜನರು ಬರುತ್ತಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುವ ಪ್ಲ್ಯಾನ್ ಇದ್ದು, ನಮ್ಮ ಶಕ್ತಿ ಏನೆಂದು ದಾವಣಗೆರೆಯಲ್ಲಿ ತೋರಿಸುತ್ತೇವೆ ಎಂದು ವಿಜಯೇಂದ್ರ ಬಣಕ್ಕೆ ಸವಾಲುನ ಹಾಕಿದರು.