ಶಿರಸಂಗಿಯಲ್ಲಿ 24ನೇ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ
ರಾಜ್ಯ ಮಟ್ಟದ ಕಲಾ ಪ್ರದರ್ಶನ ಹಾಗೂ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ
ಪ್ರತಿಷ್ಠಿತ ವಿಶ್ವಕರ್ಮ ಪ್ರಶಸ್ತಿ ಪ್ರದಾನ ಸಮಾರಂಭ
ವಿವಿಧ ಗಣ್ಯರ ಉಪಸ್ಥಿತಿ
ಸಾಂಸ್ಕೃತಿಕ ನೆಲೆಯಲ್ಲಿ ವಿಶ್ವಕರ್ಮರ ಕೋಡುಗೆ ಅಪಾರವಾಗಿದ್ದು ಧರ್ಮ-ಕರ್ಮ ಚಿಂತನೆಗಳ ಮೂಲಕ ವಿಶ್ವಕರ್ಮರು ಪ್ರಕೃತಿ ಆರಾಧಕರಾಗಿದ್ದಾರೆ ಎಂದು ನವಲಗುಂದದ ಅಜಾತ ನಾಗಲಿಂಗೇಶ್ವರ ಮಠದ ಪೂಜ್ಯರಾದ ವೀರೇಂದ್ರ ಮಹಾಸ್ವಾಮಿಗಳು ಹೇಳಿದರು.
. ಅವರು ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಹಾಗೂ ವಿಶ್ವಕರ್ಮ ಪ್ರತಿಷ್ಠಾನ ಶಿರಸಂಗಿ ಇವರ ಸಹಯೋಗದಲ್ಲಿ ವೈಶ್ವಕರ್ಮಣರ ಶಕ್ತಿಪೀಠ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ನಡೆದ ೨೪ನೇ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ರಾಜ್ಯ ಮಟ್ಟದ ಕಲಾ ಪ್ರದರ್ಶನ ಹಾಗೂ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಮತ್ತು ಪ್ರತಿಷ್ಠಿತ ವಿಶ್ವಕರ್ಮ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನಿದ್ಯವಹಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಯೋಗಿ ವೇಮನರು ಹೇಳಿದಂತೆ ಜಗತ್ತು ಇಲ್ಲವೆಂದರೆ ನಾನೂ ಕೂಡಾ ಇಲ್ಲಾ, ಜಗತ್ತು ಇದೆ ಎಂದರೆ ವಿಶ್ವಕರ್ಮ ಇದ್ದಾನೆ ಎಂದು ಅರ್ಥ, ಅದರರಂತೆ ಕಲೆ ಸಂಸ್ಕೃತಿ ಬೆಳೆಯಬೇಕಾದರೆ ವಿಶ್ವಕರ್ಮರಿಗೆ ಸಮಾನತೆ ಕೋಡುವುದು ಅನಿವಾರ್ಯ ಎಂದು ಅಂದಿನ ಪ್ರದಾನಿ ಜವಾಹರಲಾಲ್ ನೆಹರು ಅಭಿಪ್ರಾಯಪಟ್ಟಿದ್ದರು.
ಸಾಧಕರು ಸಮಾಜದ ಶಿಖರವಿದ್ದಂತೆ, ವಿದ್ಯಾರ್ಥಿಗಳಿಗೆ ಸಾಧಕರೆ ಆದರ್ಶವಾಗಿದ್ದು ತಮ್ಮ ಶೈಕ್ಷಣಿಕ ಸಮಯದಲ್ಲಿ ಶ್ರಮಪಟ್ಟು ಅಧ್ಯಯನ ಮಾಡಿ ಬಾವಿ ಸಮಾಜದ ಸ್ವತ್ತುಗಳಾಗಬೇಕು, ಶಿರಸಂಗಿಯ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಕ್ಷೇತ್ರ ಸಂರಕ್ಷಣೆ ಹಾಗೂ ಬೇಳವಣಿಗೆಯ ಜೋತಗೆ ಸಮಾಜದ ಬೆಳವಣಿಗೆಗೂ ಶ್ರಮ ಪಡುತ್ತಿದ್ದೆ, ಸಮಾಜದಲ್ಲಿ ಸಾಧಕರನ್ನು ಗುರುತಿಸಿ ಅವರಿಗೆ ಸಂಸ್ಥೆಯಿಂದ ಅತ್ಯುನತ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ ಅದರಂತೆ ಅತ್ಯುತ್ತಮ ಅಂಕ ಪಡೆದ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೂ ಸನ್ಮಾನಿಸಿ ಪ್ರೋತ್ಸಾಹಿಸುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ರಾಜ್ಯಮಟ್ಟದ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಗದಗ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜಗೋಪಾಲ ಕಡ್ಲಿಕೊಪ್ಪ ಕಲೆ ವಿಶ್ವಕರ್ಮರ ಅಸ್ಮೀತೆಯ ಸಂಕೇತವಾಗಿದೆ, ಶಿಲ್ಪಕಲೆ.ಕಾಷ್ಟಶಿಲ್ಪ,ಲೋಹಶಿಲ್ಪ, ಚಿತ್ರಕಲೆ,ಕಂಚು ಶಿಲ್ಪ, ಛಾಯಾಚಿತ್ರ ಕಲೆಗಳ ಪ್ರದರ್ಶನವನ್ನು ಆಯೋಜಿಸುತ್ತಿರುವುದು ಸಮಾಜದಲ್ಲಿ ಸಾಧಕರಿಗೆ ಇದು ಸೇತುವೆ ಆಗಿದೆ ಎಂದರು.