ಚಿಂಚಲಿ ಶ್ರೀ ಮಾಯಾಕ್ಕ ದೇವಿ ಜಾತ್ರೆಗೆ 2 ಟಿ ಎಂ ಸಿ ನೀರು ಬಿಡಲು ಸೂಚನೆ
ಹಿಡಕಲ್ ಪ್ರವಾಸಿ ಮಂದಿರದಲ್ಲಿ ನೀರಾವರಿ ಇಲಾಖೆ ಸಭೆ ನಡೆಸಿದ ಸಚಿವ ಸತೀಶ ಜಾರಕಿಹೊಳಿ
ಬೆಳಗಾವಿಯಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಿ
ಹಿಡಕಲ್ ಪ್ರವಾಸಿ ಮಂದಿರದಲ್ಲಿ ನೀರಾವರಿ ಇಲಾಖೆ ಸಭೆ
ಸಚಿವ ಸತೀಶ ಜಾರಕಿಹೊಳಿ ನೇತೃತ್ವ
ಚಿಂಚಲಿ ಶ್ರೀ ಮಾಯಾಕ್ಕ ದೇವಿ ಜಾತ್ರೆಗೆ 2 ಟಿ ಎಂ ಸಿ ನೀರು ಬಿಡಲು ಸೂಚನೆ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಪ್ರವಾಸಿ ಮಂದಿರದಲ್ಲಿ ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ
ನೀರಿನ ಸಮಸ್ಯೆ ಕುರಿತು
ಸಲಹಾ ಸಮಿತಿ ಸಭೆಯನ್ನು ಕರೆಯಲಾಗಿತ್ತು.
ನೀರಾವರಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರೈತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ನೀರಿನ ಕೊರತೆ ಆಗದಂತೆ ಸೂಚನೆ ನೀಡಲಾಯಿತು.
ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಹಿಡಕಲ್ ಜಲಾಶಯದಿಂದ ಇನ್ನು ಐದು ದಿನ ನೀರು ಬಿಡುಗಡೆಗೆ ಸೂಚನೆ ನೀಡಲಾಯಿತು.
ಚಿಂಚಲಿ ಮಾಯಕ್ಕಾ ದೇವಿ ಜಾತ್ರಾ ಮಹೋತ್ಸವಕ್ಕೆ ನೀರು ಒದಗಿಸುವ ನಿಟ್ಟಿನಲ್ಲಿ 2ಟಿಎಂಸಿ ನೀರು ಕಾಯ್ದಿರಿಸಲು ಹೇಳಲಾಯಿತು.
ಮುಂಬರುವ ದಿನಗಳಲ್ಲಿ ಜಲಾಶಯದಲ್ಲಿ ಹೂಳೆತ್ತಬೇಕು.
ಹೊಳೆತ್ತುವ ಕೆಲಸಕ್ಕೆ ಸರ್ಕಾರದಿಂದ ಹತ್ತರಿಂದ ಹದಿನೈದು ಜೆಸಿಬಿ ನೀಡಲಾಗುವುದು ಎಂದು ಸಚಿವರು ಹೇಳಿದರು.
ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಕೊರತೆ ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆ ಆಗದಂತೆ ನೀರು ಕಾಯ್ದಿರಿಸಬೇಕೆಂದರು.
ಈ ಸಂದರ್ಭದಲ್ಲಿ ಬಾಗಲಕೋಟೆ ಶಾಸಕ ಜಿ.ಟಿ.ಪಾಟೀಲ, ದುರ್ಯೋಧನ ಐಹೊಳೆ,ಸಿದ್ದು ಸವದಿ,ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ,ನೀರಾವರಿ ಇಲಾಖೆ ಅಧಿಕಾರಿಗಳ ಭಾಗಿಯಾಗಿದ್ದರು.