ಬೆಂಗಳೂರು, (ನವೆಂಬರ್ 29): ಕರ್ನಾಟಕ ಬಿಜೆಪಿಯಲ್ಲಿ ಅಂತರ್ಯುದ್ಧ, ಬಣ ಬಡಿದಾಟ ಜೋರಾಗಿದೆ. ಶಾಸಕ ಬಸನಗೌಡ ಪಾಟೀಲ್ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವಿನ ಬಹಿರಂಗ ಆರೋಪ-ಪ್ರತ್ಯಾರೋಪಗಳು ಜೋರಾಗಿದ್ದು, ಇದು ದೆಹಲಿಯ ಹೈಕಮಾಂಡ್ ನಾಯಕರ ಗಮನಕ್ಕೂ ಬಂದಿದೆ. ಎಲ್ಲವನ್ನೂ ಅರಿತ ವರಿಷ್ಠರು ಇದೀಗ ಬಣ ಕಿತ್ತಾಟಕ್ಕೆ ಬ್ರೇಕ್ ಹಾಕುವುದಕ್ಕೆ ಟೈಂ ಫಿಕ್ಸ್ ಮಾಡೇ ಬಿಟ್ಟಿದ್ದಾರೆ. ಡಿಸೆಂಬರ್ನಲ್ಲಿ ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಎಲ್ಲವನ್ನೂ ಚರ್ಚೆ ಮಾಡಿ ಹೈಕಮಾಂಡ್ ಗಮನಕ್ಕೆ ತರಲು ಪ್ಲ್ಯಾನ್ ಮಾಡಲಾಗಿದೆ. ಇದರ ಮಧ್ಯೆಯೇ ಇದೀಗ ಶಾಸಕ ಯತ್ನಾಳ್ ಪ್ರತ್ಯೇಕ ಹೋರಾಟಕ್ಕೆ ಕೌಂಟರ್ ಆಗಿ ವಿಜಯೇಂದ್ರ ಆಪ್ತರು ಬೃಹತ್ ಸಮಾವೇಶಕ್ಕೆ ಸಜ್ಜಾಗಿದ್ದಾರೆ.
ದೇಗುಲಗಳ ಭೇಟಿ ನೆಪದಲ್ಲಿ ತಂತ್ರ ಹೆಣೆದ ವಿಜಯೇಂದ್ರ ತಂಡ!
ಬೀದರ್ನಿಂದ ವಕ್ಫ್ ವಿರುದ್ಧ ಹೋರಾಟ ಆರಂಭಿಸಿರುವ ಬಸನಗೌಡ ಪಾಟೀಳ್ ಯತ್ನಾಳ್, ಜಾಗೃತಿ ಅಭಿಯಾನ 5ನೇ ದಿನಕ್ಕೆ ಕಾಲಿಟ್ಟಿದೆ. ಇದಕ್ಕೆ ಕೌಂಟರ್ ಆಗಿಯೇ ಇದೀಗ ವಿಜಯೇಂದ್ರಗೆ ಎಂ.ಪಿ.ರೇಣುಕಾಚಾರ್ಯ ಟೀಂ ಬೆನ್ನಿಗೆ ನಿಂತಿದ್ದು, ಶೀಘ್ರದಲ್ಲೇ ವಿಜಯೇಂದ್ರ ಪರ ದಾವಣಗೆರೆಯಲ್ಲಿ ಬೃಹತ್ ಸಮಾವೇಶಕ್ಕೆ ತಯಾರಿ ನಡೆಸಿದ್ದಾರೆ. ಇದರ ಮೊದಲ ಭಾಗವಾಗಿಯೇ ಟೆಂಪನ್ ರನ್ ಶುರು ಮಾಡಿಕೊಂಡಿದ್ದಾರೆ.