ರಾಜ್ಯಪಾಲರಗಿರುವ ವಿವಿಗಳ ಮುಖ್ಯ ಅಧಿಕಾರವನ್ನು ಸಿಎಂ ವ್ಯಾಪ್ತಿಗೆ ತರಲು ನಮ್ಮ ಸರಕಾರ ನಿರ್ಧಾರ ಮಾಡಿದೆ : ಸಚಿವ ಎಚ್ ಕೆ ಪಾಟೀಲ್
ವಿಶ್ವವಿದ್ಯಾಲಯಗಳು ಸಾಕಷ್ಟು ಸಮಸ್ಯೆ ಹಾಗೂ ಸವಾಲು ಎದುರಿಸುತ್ತಿವೆ
ರಾಜ್ಯಪಾಲರಗಿರುವ ವಿವಿಗಳ ಮುಖ್ಯ ಅಧಿಕಾರ
ಸಿಎಂ ವ್ಯಾಪ್ತಿಗೆ ತರಲು ನಮ್ಮ ಸರಕಾರ ನಿರ್ಧಾರ
ಸಚಿವ ಎಚ್ ಕೆ ಪಾಟೀಲ್ ಹೇಳಿಕೆ
ರಾಜ್ಯಪಾಲರಗಿರುವ ವಿವಿಗಳ ಮುಖ್ಯ ಅಧಿಕಾರವನ್ನು ಸಿಎಂ ವ್ಯಾಪ್ತಿಗೆ ತರಲು ನಮ್ಮ ಸರಕಾರ ನಿರ್ಧಾರ ಮಾಡಿದೆ. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಸಾಕಷ್ಟು ಸಮಸ್ಯೆ ಹಾಗೂ ಸವಾಲು ಎದುರಿಸುತ್ತಿವೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು ಉದಾಹರಣೆಗೆ ಕರ್ನಾಟಕ ವಿವಿಯಲ್ಲಿ ಸಾಕಷ್ಟು ಸಮಸ್ಯೆ ಇವೆ. ಸಾಕಷ್ಟು ವಿಭಾಗಗಳಲ್ಲಿ ನೇಮಕಾತಿ ಆಗಿಲ್ಲ. ಹಣಕಾಸು ವ್ಯವಸ್ಥೆ ಸರಿ ಇಲ್ಲ. ಈ ಎಲ್ಲ ಸಮಸ್ಯೆ ನಿವಾರಣೆಗೆ ರಾಜ್ಯಪಾಲರ ಬದಲು ಸಿಎಂಗೆ ಅಧಿಕಾರ ಕೂಡುಬೇಕು ಎನ್ನವುದು ನಮ್ಮ ಚಿಂತನೆ.
ಹಣಕಾಸು ವ್ಯವಸ್ಥೆ ನಿರ್ವಹಣೆ, ಆಡಳಿತ ವ್ಯವಸ್ಥೆಗೆ ಸರಕಾರ ನೇರ ಪಾಲ್ಗೊಳ್ಳುವಿಕೆ ಅಗತ್ಯವಿದೆ ಎಂದರು.
ಯಾವುದೇ ವಿಶ್ವವಿದ್ಯಾಲಯದಲ್ಲಿ ಸರಿಯಾಗಿ ಕಾರ್ಯ ನಡೆತಾ ಇಲ್ಲ. ನೇಮಕಾತಿ ಸೇರಿದಂತೆ ಅನೇಕ ಕಾರ್ಯ ನೆನೆಗುದಿಗೆ ಬಿದ್ದಿದೆ ಹೀಗಾಗಿ ಈ ಚಿಂತನೆ ನಡೆದಿದೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೇಲಿನ ಐದು ವರ್ಷಗಳ ಕಾಲದ ಭ್ರಷ್ಟಾಚಾರ ಕುರಿತು ತನಿಖೆಗೆ ಸರಕಾರದ ನಿಲುವು ವಿಚಾರ
ಈ ಹಿಂದೆ ಸಾಮಾಜಿಕ ಕಾರ್ಯಕರ್ತ ಅಬ್ರಾಹಂ ರಾಜ್ಯಪಾಲರಿಗೆ ಯಡಿಯೂರಪ್ಪ ವಿರುದ್ಧ ತನಿಖೆಗೆ ಒತ್ತಾಯ ಮಾಡಿದ್ದರು. ಅಂದು ರಾಜ್ಯಪಾಲರು ಅಬ್ರಹಾಂ ಮನವಿ ತಿರಸ್ಕಾರ ಮಾಡಿದ್ದರು.
ಅದು ಸರಿಯಲ್ಲ ಹೀಗಾಗಿ ಮರು ತನಿಖೆಗೆ ಸರಕಾರ ನಿರ್ಧಾರ ಮಾಡಿದೆ ಎಂದರು. ಯಡಿಯೂರಪ್ಪ ಮೇಲಿನ ಭ್ರಷ್ಟಾಚಾರ ತನಿಖೆ ಆಗಬೇಕು.