Breaking News

ಮದುವೆಯಾಗಿದ್ದ ಗಂಡನನ್ನು ಬಿಟ್ಟು ಪ್ರಿಯಕರರೊಂದಿಗೆ ಮಕ್ಕಳ ಕಿಡ್ನಾಪ್, ಹಣಕ್ಕೆ ಬೇಡಿಕೆ….. ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯರಿಬ್ಬರು ಸೇರಿ ಇಬ್ಬರ ಪ್ರಿಯಕರರ ಅರೆಸ್ಟ್

Spread the love

ಮದುವೆಯಾಗಿದ್ದ ಗಂಡನನ್ನು ಬಿಟ್ಟು ಪ್ರಿಯಕರರೊಂದಿಗೆ ಮಕ್ಕಳ ಕಿಡ್ನಾಪ್, ಹಣಕ್ಕೆ ಬೇಡಿಕೆ….. ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯರಿಬ್ಬರು ಸೇರಿ ಇಬ್ಬರ ಪ್ರಿಯಕರರ ಅರೆಸ್ಟ್

– ಸಪ್ತಪದಿ ತುಳಿದು ಪತಿಯ ಜೊತೆಗೆ ಸುಖ ಜೀವನ ನಡೆಸಬೇಕಾಗಿದ್ದ ಇಬ್ಬರು ಚಾಲಕಿ ಮಹಿಳೆಯರು ತಮ್ಮ ತಮ್ಮ ಪ್ರಿಯಕರರೊಂದಿಗೆ ಸೇರಿ ಮಕ್ಕಳನ್ನು ಕಿಡ್ನಾಪ ಮಾಡಿಕೊಂಡು, ಮಕ್ಕಳ ಪತಿ ಹಾಗೂ ಪೋಷಕರಿಗೆ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಭೇದಿಸುವಲ್ಲಿ ಧಾರವಾಡ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಮಕ್ಕಳ ರಕ್ಷಣೆಯ ಜತೆಗೆ ನಾಲ್ವರನ್ನು ಬಂಧಿಸಿದ್ದಾರೆ.

ವೈ- ಕಳೆದ ನವೆಂಬರ್ 7 ರಂದು ರೇಷ್ಮಾ ಹಾಗೂ ಪ್ರಿಯಾಂಕಾ ಸಾಂಬ್ರಾಣಿ ಇಬ್ಬರು ಮಹಿಳೆಯರು ಮಕ್ಕಳನ್ನು ರಾಣೆಬೆನ್ನೂರಿನ ಹಾಸ್ಟೆಲಗೆ ಮಕ್ಕಳನ್ನು ಸೇರಿಸುವಯದಾಗಿ ಮನೆಯವರಿಗೆ ತಿಳಿಸಿ ಇಬ್ಬರು ತಮ್ಮ ಆರು ಮಕ್ಕಳೊಂದಿಗೆ ಮನೆಯಿಂದ ಹೋಗಿದ್ದರು. ನಂತರ ಮನೆಯಿಂದ ಆಚ್ಚೆತೆರಳಿ ರೇಷ್ಮಾ ತನ್ನ ಪ್ರಿಯಕರ ಸುನೀಲನನ್ನು ಕುಡಿಕೊಂಡಿದ್ದಾಳೆ.

ಇನ್ನೂ ಗಂಡನನ್ನು ಕಳೆದುಕೊಂಡಿದ್ದ ಪ್ರಿಯಾಕ ಕೂಡಾ ಶಿಕಾರಿಪುರದ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡ ಮಕ್ಕಳ ಪೋಷಕರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣಕ್ಕೆ ಬೇಡಿಕೆ ಬರುತ್ತಿದಂತೆ ಮನೆಯ ಪೋಷಕರು ವಿದ್ಯಾಗಿರಿ ಪೊಲೀಸ್ ಠಾಣೆಗೆ ತೆರಳಿ ಕಿಡ್ನಾಪ್ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದರು.

ಮಹಿಳೆಯರಿಬ್ಬರು ತಮ್ಮ ಅನೈತಿಕ ಸಂಬಂಧ ಹೊಂದಿದ್ದ ಇಬ್ಬರು ಪುರುಷರೊಂದುಗೆ ಸೇರಿ ಮಕ್ಕಳ ಬೀಡಲು 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಇನ್ನೂ ದೂರು ಪಡೆದುಕೊಂಡ ವಿದ್ಯಾಗಿರಿ ಠಾಣೆಯ ಪೊಲೀಸರು ಆರು ಮಕ್ಕಳ ಪತ್ತೆಗಾಗಿ, ಮಹಾರಾಷ್ಟ್ರ ಹೈದರಾಬಾದ್ ತನಿಖೆ ಕೈಗೊಂಡಿದ್ದರು.

ಇನ್ನೂ ಇಬ್ಬರು ಮಹಿಳೆಯರು ಆರು ಮಕ್ಕಳೊಂದಿಗೆ ತಮ್ಮ ಇಬ್ಬರು ಪ್ರಿಯಕರರೊಂದಿಗೆ ಇರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಈಗ ನಾಲ್ವರನ್ನು ಹೆಡೆಮುರಿ ಕಟ್ಟುವುದರ ಜೊತೆಗೆ ಆರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.

ಇನ್ನೂ ಮಕ್ಕಳ ನೋಡುತ್ತಿದಂತೆ ಎರಡು ಕೂಟುಂಬದ ಪೋಷಕರು ಮಹಿಳೆಯರ ಕೃತ್ಯಕ್ಕೆ ಹಿಡಿಶಾಪ ಹಾಕಿ ನಿಟ್ಟುಸಿರು ಬಿಟ್ಟು ಪೊಲೀಸರ ಕಾರ್ಯಕ್ಕೆ ಶ್ಲಾಘಿಸಿದರು. ಈ ಕುರಿತು ಮಾತನಾಡಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಪೋನ ಕರೆ ಜಾಡು ಜತೆಗೆ ವಿವಿಧ ಅಯಾಮಗಳಲ್ಲಿ ತನಿಖೆ ಮಾಡಲಾಗಿದೆ. ಪೋಷಕರ ಮಾಹಿತಿ ಮೇರೆಗೆ ತನಿಖೆ ನಡೆಸಿ ಮಕ್ಕಳ ರಕ್ಷಣೆ ಜತೆಗೆ ಇಬ್ಬರು ಮಹಿಳೆಯರ ಬಂಧಿಸಲಾಗಿದೆ ಎಂದು ತಿಳಿಸಿದರು.

 


Spread the love

About Laxminews 24x7

Check Also

ಡಾಲ್ಮಿಯಾ ಸಿಮೆಂಟ್ ಕಾರ್ಖಾನೆಯಿಂದ ಯಾದವಾಡ ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ 16 ಲಕ್ಷ ರೂ. ಮತ್ತು ಕುಲಗೋಡ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ 10 ಲಕ್ಷ ರೂಪಾಯಿ ದೇಣಿಗೆ*

Spread the love *ಡಾಲ್ಮಿಯಾ ಸಿಮೆಂಟ್ ಭಾರತ ಲಿ.., ಸಮಾಜಮುಖಿ ಕಾರ್ಯಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಫೀದಾ* *ಮೂಡಲಗಿ*- ಸಿಮೆಂಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ