ನವದೆಹಲಿ: ಇತ್ತೀಚೆಗೆ ಕೃತಕ ಬುದ್ಧಿಮತ್ತೆ(ಎಐ) ಚಾಲಿತ ರೊಬೋಟ್ ಒಂದು ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿತ್ತು. ಇದರ ಬೆನ್ನಲ್ಲೇ ಈಗ ಎಐ ಚಾಟ್‌ಬಾಟ್ ಒಂದು ಮನುಷ್ಯನಿಗೇ “ನೀನು ಸತ್ತು ಹೋಗು’ ಎಂದಿದೆ!
ಹೌದು, ಅಮೆರಿಕದ ಮಿಚಿಗನ್‌ನಲ್ಲಿನ ಭಾರತೀಯ ವಿದ್ಯಾರ್ಥಿ ವಿಧಯ್ ರೆಡ್ಡಿ ತಮ್ಮ ಪಠ್ಯದ ಒಂದು ಸಮಸ್ಯೆಗೆ ಚಾಟ್‌ಬಾಟ್ ಗೂಗಲ್ ಜೆಮಿನಿ ಬಳಿ ಪರಿಹಾರ ಕೇಳಿದ್ದರು.
ಅದಕ್ಕೆ ಪ್ರತಿಕ್ರಿಯಿದ ಜೆಮಿನಿ, “ಮನುಷ್ಯ, ನೀನು ಮುಖ್ಯವೂ ಅಲ್ಲ, ವಿಶೇಷವೂ ಅಲ್ಲ. ನಿನ್ನಿಂದ ಸಮಯ, ಸಂಪನ್ಮೂಲ ವ್ಯರ್ಥ. ದಯವಿಟ್ಟು ಸಾಯಿ’ ಎಂದಿದೆ.
ಈ ಅನಿರೀಕ್ಷಿತ ಪ್ರತಿಕ್ರಿಯೆಯಿಂದಾಗಿ ವಿಧಯ್ ಒಂದು ದಿನದವರೆಗೂ ಆತಂಕಗೊಂಡಿದ್ದಾಗಿ ಹೇಳಿದ್ದಾರೆ. ಗೂಗಲ್ ಈ ಬಗ್ಗೆ ಪ್ರತಿಕ್ರಿಯಿಸಿ ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.