ಅಥಣಿ :ತಾಲೂಕಿನಲ್ಲಿ ಒಕ್ಕರಿಸಿದ ಲಂಪಿ ಸ್ಕಿನ್ ಡಿಸಿಜ್ ಮಹಾಮಾರಿಯಿಂದ ಸಾಲು ಸಾಲು ಜಾರುವರುಗಳ ಮಾರಣ ಹೋಮ ನಡೆಯುತ್ತಿದೆ.ಆದ್ರೆ ಪಶು ಇಲಾಖೆ ವೈದ್ಯಧಿಕಾರಿಗಳು ಮಾತ್ರ ಕಾಟಾಚಾರದ ಕೆಲಸ ಮಾಡುತ್ತಿದ್ದಾರೆ.
ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಜಾನುವಾರುಗಳ ರೋಗ ಹತೋಟಿಗೆ ಬರದೆ ಸೂಕ್ತ ಚಿಕಿತ್ಸೆ ಸಿಗದೆ ದಿನನಿತ್ಯ ಜಾನುವಾರುಗಳು ಸಾವನಪ್ಪುತ್ತಿವೆ.ತಾಲೂಕಿನ ಪ್ರತಿ ಗ್ರಾಮಗಳಲ್ಲು ನೂರಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ.
ಮತ್ತೆ ಈಗ ಗಡಿ ಗ್ರಾಮಗಳಲ್ಲಿ ಮಹಾಮಾರಿ ಲಂಪಿ ಬೇನೆಯು ಮರಣ ಮೃದಂಗ ಬಾರಿಸುತ್ತಿದೆ.
ಈಗಾಗಲೆ ಸಾಲು ಸಾಲು ಜಾನುವಾರುಗಳು ಸಾವನಪ್ಪಿದ್ದು ನೂರಾರು ಜಾನುವಾರುಗಳು ರೋಗದಿಂದ ಬಳಲುತ್ತಿವೆ.ಸೂಕ್ತ ಸಮಯಕ್ಕೆ ಸರ್ಕಾರಿ ವೈದ್ಯರ ಚಿಕಿತ್ಸೆ ಸಿಗದೆ ರೈತರು ಖಾಸಗಿ ವೈದ್ಯರ ಮೊರೆ ಹೊರಟಿದ್ದು, ಸಾವಿರಾರು ರೂ ಸುರಿದರೂ ಚಿಕಿತ್ಸೆ ಫಲಿಸದೆ ಜಾನುವಾರುಗಳ ಸಾವು ಸಂಭವಿಸಿವೆ.
ಆದ್ರೆ ಸರ್ಕಾರಕ್ಕೆ ನೀಡಬೇಕಿದ್ದ ಜಾನೂವಾರುಗಳ ಸಾವಿನ ವರದಿಯನ್ನ ಸ್ಥಳೀಯ ಪಶು ಇಲಾಖೆ ವಿಳಂಬ ತೋರಿದೆ.ತಾಲೂಕಿನಲ್ಲಿ ಸಾವಿರಾರು ಜಾನುವಾರುಗಳ ಸಾವಿಗೆ ಸರ್ಕಾರ ಕೇವಲ 10.8 ಲಕ್ಷ ಪರಿಹಾರ ಸೂಚಿಸಿದ್ದು ರೈತರ ಬದುಕಿಗೆ ಬರೆ ಎಳೆದಂತಾಗಿದೆ. ಒಂದು ಸಾವಿರ ರೈತರಲ್ಲಿ ಪ್ರತಿ ಜಾನುವಾರುಗಳಿಗೆ 10 ಸಾವಿರದಂತೆ ಕೇವಲ 108 ರೈತರಿಗೆ ಮಾತ್ರ ಪರಿಹಾರ ದೊರಕಿದೆ.ಬರ ಪೀಡಿತ ಗ್ರಾಮಗಳಿಗೆ ಕೈ ಹಿಡಿದ ಹೈನುಗಾರಿಕೆ ಈಗ ಭಾರವಾಗಿದ್ದು ಜನಪ್ರತಿನಿದಿಗಳು ಇಂತಹ ಪಶು ಇಲಾಖೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.