Breaking News

ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಪರಿಶಿಷ್ಟರನ್ನು ಸಮಾಜದ‌‌ ಮುನ್ನೆಲೆಗೆ ತರುವ ಕಾರ್ಯವಾಗಬೇಕು : ಪಿ.ಎಂ.ನರೇಂದ್ರ‌ಸ್ವಾಮಿ

Spread the love

ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ

ಪರಿಶಿಷ್ಟರನ್ನು ಸಮಾಜದ‌‌ ಮುನ್ನೆಲೆಗೆ ತರುವ ಕಾರ್ಯವಾಗಬೇಕು : ಪಿ.ಎಂ.ನರೇಂದ್ರ‌ಸ್ವಾಮಿ

ಬೆಳಗಾವಿ: ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಲು, ದುರ್ಬಲ ವರ್ಗಕ್ಕೆ ಉತ್ತಮವಾದಂತಹ ಯೋಜನೆ ನಿರ್ಮಿಸುವುದರ ಮೂಲಕ ಪರಿಶಿಷ್ಟರನ್ನು ಸಮಾಜದ‌ ಮುನ್ನೆಲೆಗೆ ತರಬಹುದಾಗಿದೆ. ಅಧಿಕಾರಿಗಳು ಇದನ್ನು ಅರಿತುಕೊಂಡು ಶ್ರಮಿಸಬೇಕು ಎಂದು ಕರ್ನಾಟಕ ವಿಧಾನ ಮಂಡಳ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು ತಿಳಿಸಿದರು.

ಬೆಳಗಾವಿ ಸುವರ್ಣ‌ಸೌಧದಲ್ಲಿ ಶನುವಾರ(ನ.16) ಜರುಗಿದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಯೋಜನೆಗಳು ಮತ್ತು ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗಾಗಿ ಪ್ರತ್ಯೇಕ ಕಾಯ್ದೆ ಜಾರಿಗೊಳಿಸಲಾಗಿದ್ದು, ಇಲಾಖಾ ಅನುದಾನದಲ್ಲಿ‌ ನಿರ್ದಿಷ್ಟಪಡಿಸಿದ ಅನುದಾನವನ್ನು ಕಾಲಮಿತಿ ಒಳಗಾಗಿ ವೆಚ್ಚ ಮಾಡುವುದರ ಜೊತೆಗೆ ಇಲಾಖೆ ಅನುದಾನದಲ್ಲಿ ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನದ‌ ಸದ್ಬಳಕೆ ಆಗಬೇಕು. ಸರ್ಕಾರ ನೀಡಿದ ಅನುದಾನ ಅಪವ್ಯಯವಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಶಾಲೆ ಸೇರಿದಂತೆ ವಿವಿಧ ಸ್ವತ್ತುಗಳ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದರು.

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ‌ ಹಾಗೂ ಪರಿಶಿಷ್ಟ ಪಂಗಡಗಳ ಕುಟುಂಬಗಳ‌ ಸಂಖ್ಯೆಗೆ ಅನುಗುಣವಾಗಿ ವೈಯಕ್ತಿಕ ಶೌಚಾಲಯಗಳ‌ ನಿರ್ಮಾಣಕ್ಕೆ ಕ್ರಮ‌ ವಹಿಸಬೇಕು.

ಜಲ ಜೀವನ‌ ಮೀಷನ್ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪ.ಪಂಗಡಗಳ ಕಾಲನಿಯಲ್ಲಿನ‌ ಪ್ರತಿಯೊಂದು ಮನೆಗೂ ನಳ ಸಂಪರ್ಕ ಒದಗಿಸಿ ನೀರು ಒದಗಿಸಬೇಕು. ಈ‌ ಕುರಿತು ಸಮಾಜ‌ ಕಲ್ಯಾಣ ಇಲಾಖೆ ಅಧಿಕಾರಿಗಳು‌ ಖುದ್ದಾಗಿ ಭೇಟಿ‌ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿ ಕಾಮಗಾರಿಗಳಲ್ಲಿ ಯಾವುದೇ ಲೋಪಗಳು ಆಗದಂತೆ ನಿಗಾ ವಹಿಸುವದರ ಜೊತೆಗೆ ಈ ಯೋಜನೆಯಡಿ ಅಳವಡಿಸಲಾಗುವ ಪೈಪಗಳ ಗುಣಮಟ್ಟವನ್ನು ಪರೀಶಿಲಿಸಬೇಕು. ಈ ಕುರಿತು ನೋಡೆಲ್‌ ಅಧಿಕಾರಿಗಳನ್ನು ನೇಮಿಸಿ ಪರಿಶೀಲಿಸಲು ಸೂಚನೆ‌ ನೀಡಿದರು.

ಜಿಲ್ಲಾ ಹಾಗೂ ತಾಲೂಕು ಮಟ್ಟದ ಕೆ.ಡಿ.ಪಿ‌. ಪ್ರಗತಿ ಪರಿಶೀಲನಾ ಸಭೆಯಲ್ಲಿ‌ ಜಲ ಜೀವನ ಮಿಷನ ಯೊಜನೆ ಕುರಿತು ಪ್ರಗತಿ ಪರಿಶೀಲನೆಯಾಗಬೇಕು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ‌ ಪರಿಶಿಷ್ಟ ವರ್ಗಗಳ‌ ಕಲ್ಯಾಣ ಅಧಿಕಾರಿಗಳು ಈ‌ ಕುರಿತು ನಿಗಾ ವಹಿಸುವಂತೆ ನರೇಂದ್ರಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ಸುಧಾರಣೆಗಾಗಿ ಇರುವ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಅಪೌಷ್ಟಿಕತೆ ನಿವಾರಣೆಗೆ ಮುಂದಾಗಬೇಕು. ಅದೇ ರೀತಿ ಜಿಲ್ಲೆಯಲ್ಲಿ ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸುವ ಯೋಜನೆಯಡಿ ನಿವೇಶನ ಹಾಗೂ ವಸತಿ ಇಲ್ಲದ ದೇವದಾಸಿಯರನ್ನು ಗುರುತಿಸಿ ಅವರಿಗೆ ಸಮರ್ಪಕವಾಗಿ ಪುನರ್ವಸತಿ ಕಲ್ಪಿಸುವ ಕಾರ್ಯವಾಗಬೇಕು. ಈ ಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ ಸಮಾಜ‌ ಕಲ್ಯಾಣ ಹಾಗೂ ಮಹಿಳಾ‌ ಇಲಾಖೆ‌ಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗಾಗಿ ಜಾರಿಯಲ್ಲಿರುವ ಸರಕಾರದ ಯೋಜನೆ ಹಾಗೂ ಸವಬಲಭ್ಯಗಳು ದೊರಕಿಸಿ ಅವರನ್ನು ಕೂಡ ಸಮಾಜದ ಮುಖ್ಯವಾಹಿನಿಗೆ ತರುವಂತಹ‌ ಕಾರ್ಯವಾಗಬೇಕು.


Spread the love

About Laxminews 24x7

Check Also

16 ಲಕ್ಷ ರೂ.ಗಾಗಿ ಪ್ರೇಯಸಿಯ ದೇಹ 16 ತುಂಡು ಮಾಡಿದ ಪ್ರಿಯಕರ!

Spread the love ತೆಲಂಗಾಣ: ದೆಹಲಿಯಲ್ಲಿ ಶ್ರದ್ಧಾ ವಾಕರ್​ ಎಂಬ ಯುವತಿಯನ್ನು 35 ತುಂಡಗಳನ್ನಾಗಿ ಕತ್ತರಿಸಿದ್ದ ಆಕೆಯ ಪ್ರಿಯಕರ ಅಫ್ತಾಬ್ ಪೂನಾವಾಲಾ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ