ಗೋಕಾಕ : ಗೋವಾ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರದಂದು ಪ್ರತಿಭಟನೆ ನಡೆಯಿಸಿ ತಹಶೀಲ್ದಾರ್ ಡಾ.ಮೋಹನ ಭಸ್ಮೆ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಕಳೆದ ಹಲವಾರು ವರ್ಷಗಳಿಂದ ಗೋವಾದಲ್ಲಿ ವಾಸವಾಗಿರುವ ಕನ್ನಡಿಗರನ್ನು ವಿನಾ ಕಾರಣ ಗೋವಾ ಸರಕಾರ ಮನೆಗಳನ್ನು ತೆರವುಗೊಳಿಸಿ ತೊಂದರೆಯನ್ನು ನೀಡುತ್ತಿರುವುದು ಖಂಡನೀಯವಾಗಿದ್ದು, ಸುಮಾರು 40 ವರ್ಷಗಳಿಂದ ಗೋವಾದ ಮಾಪ್ಸಾದ ಪೊರಬೊವಾಡಾ, ಕಲಂಗುಟ್ ನಲ್ಲಿ ವಾಸಿಸುತ್ತಿರುವ
20 ಮನೆಗಳನ್ನು ತೆರವುಗೊಳಿಸಲಾಗಿದ್ದು, ಅಂತೆಯೇ ಖಡಪಾವಾಡಾ-ಕುಚೇಲಿಯಲ್ಲಿ ನಿರ್ಮಿಸಿದ್ದ 36 ಮನೆಗಳನ್ನು ಕೂಡ ಕಳೆದ ಸೋಮವಾರ ತೆರವುಗೊಳಿಸಲಾಗಿದೆ. ವಾಸ್ಕೋ, ಝರಿ, ಮಡಗಾವ, ಜುವಾರಿ ನಗರ ಹಾಗೂ ಸಾಂಗೋಲ್ಡಾದಲಿ ಸಾವಿರಾರು ಜನ ಕನ್ನಡಿಗರು ಉದ್ಯೋಗಕ್ಕಾಗಿ ಗೋವಾ ರಾಜ್ಯವನ್ನು ಅವಲಂಬಿಸಿದ್ದಾರೆ. ಹೀಗೆ ಗೋವಾದಲ್ಲಿ ಆಶ್ರಯ ಪಡೆದು ಕನ್ನಡಿಗರಿಗೆ ಗೋವಾ ಸರಕಾರ , ವಿದ್ಯುತ್, ನೀರು ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದೆ ಆದರೆ ಇತ್ತೀಚೆಗೆ ಯಾವುದೇ ಮುನ್ನಸೂಚನೆ ನೀಡದೆ ಮಾಪ್ಪಾದ ಪೊರಬೊವಾಡಾ, ಕಲಂಗುಟ್ ನಲ್ಲಿ ವಾಸಿಸುತ್ತಿರುವ ಕನ್ನಡಿಗರ ಮನೆಗಳನ್ನು ತೆರವುಗೊಳಿಸಿ ಯಾವುದೇ ಪುನರ್ವಸತಿ ಕಲ್ಪಿಸಿಲ್ಲಾ ಹಾಗಾಗಿ ಈ ಪ್ರದೇಶದಲ್ಲಿ ವಾಸವಿದ್ದ ಕನ್ನಡಿಗರು ಬೀದಿಪಾಲಾಗಿದ್ದಾರೆ. ಕರ್ನಾಟಕ ಸರಕಾರ ತಕ್ಷಣ ಮಧ್ಯೆ ಪ್ರವೇಶಿಸಿ ಕರ್ನಾಟಕ ಒಬ್ಬ ಸಚಿವರನ್ನು ಗೋವಾ ರಾಜ್ಯಕ್ಕೆ ಕಳುಹಿಸಿ ಗೋವಾದಲ್ಲಿ ವಾಸವಾಗಿರುವ ಕನ್ನಡಿಗರ ಹಿತ ಕಾಪಾಡಿ ಅವರಿಗೆ ಗೋವಾ ಸರಕಾರ ಪುನರ್ವಸತಿ ಕಲ್ಪಿಸುವಂತೆ ನೋಡಿಕೋಳ್ಳಬೇಕೆಂದು ಖಾನಪ್ಪನವರ ಕರ್ನಾಟಕ ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಮುಖಂಡರುಗಳಾದ ಸಾದಿಕ ಹಲ್ಯಾಳ, ದೀಪಕ ಹಂಜಿ, ಹನಿಫ ಹನದಿ, ಬಸವರಾಜ ಗಾಡಿವಡ್ಡರ, ಮಹಾದೇವ ಮಕ್ಕಳಗೇರಿ, ಮಲ್ಲು ಸಂಪಗಾರ, ರಮೇಶ್ ಕಮತಿ, ಕರೆಪ್ಟ ಹೋರಟ್ಟಿ, ರಾಮಸಿದ್ದ ತೋಳಿ, ಪಪ್ಪು ಹಂದಿಗುಂದ, ರಾಮ ಕುಡ್ಡೇಮ್ಮಿ, ಕೆಂಪಣ್ಣ ಕಡಕೋಳ, ಶ್ರೀಶೈಲ ಹಂಜಿ, ಗುರು ಮುನ್ನೋಳಿಮಠ, ರಾಜೇಂದ್ರ ಕೆಂಚನಗುಡ್ಡ, ಮಂಜು ಜಾಗನೂರ, ಭೀಮಪ್ಪ ಕೊಂಗನೋಳಿ, ಸಂತೋಷ ಉಪ್ಪಾರ, ಅರ್ಜುನ್ ಕಟಕಟೆ, ನಾಗೇಶ ಮಕ್ಕಳಗೇರಿ ಉಪಸ್ಥಿತರಿದ್ದರು