ಮುಂಬಯಿ: ಮಹಿಳೆಯೊಬ್ಬಳು ಪುರುಷನೊಂದಿಗೆ ಹೊಟೇಲ್ ರೂಂ ಕಾಯ್ದಿರಿಸಿ, ಆತನೊಂದಿಗೆ ಹೋದರೆ ಅದು ಲೈಂಗಿಕ ಕ್ರಿಯೆಗೆ ಸಮ್ಮತಿ ಸೂಚಿಸಿದಂತೆ ಅರ್ಥವಲ್ಲ ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಹೇಳಿದೆ.
ಹೊಟೇಲ್ ರೂಮನ್ನು ಮಹಿಳೆ, ಪುರುಷರಿಬ್ಬರೂ ಸೇರಿಯೇ ಕಾಯ್ದಿರಿಸಿದ ಬಗ್ಗೆ ದಾಖಲೆಗಳಿದ್ದರೂ, ಅದರರ್ಥ ಲೈಂಗಿಕ ಕ್ರಿಯೆ ಬಗ್ಗೆ ಮಹಿಳೆಯ ಸಮ್ಮತಿಯಿದೆ ಎಂದಲ್ಲ ಎಂದು ನ್ಯಾಯಪೀಠ ಹೇಳಿದೆ.
2021ರಲ್ಲಿ ಮಡ್ಗಾಂವ್‌ನ ಕೋರ್ಟ್ ಅತ್ಯಾಚಾರ ಆರೋಪಿ ಗುಲ್ಶರ್ ಅಹ್ಮದ್ ಎಂಬಾತನ ಬಿಡುಗಡೆಗೆ ಆದೇಶಿಸಿತ್ತು.
ರೂಂ ಕಾಯ್ದಿರಿಸುವಾಗ ಮಹಿಳೆಯೂ ಭಾಗಿಯಾಗಿದ್ದರಿಂದ ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡಿದ್ದಾಳೆ. ಹಾಗಾಗಿ ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸಲಾಗದು ಎಂದು ಕೋರ್ಟ್ ಆದೇಶಿಸಿತ್ತು.
ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಕೋರ್ಟ್ “ದೂರು ನೀಡಿದಾಕೆ ಆರೋಪಿಯೊಂದಿಗೆ ತೆರಳಿದ್ದಕ್ಕೆ ಸಂದೇಹವಿಲ್ಲ. ಆಕೆ ಆರೋಪಿಯೊಂದಿಗೆ ರೂಮಿನೊಳಗೆ ತೆರಳಿದ್ದರೂ ಅದು ಲೈಂಗಿಕ ಕ್ರಿಯೆಗೆ ನೀಡಿದ ಸಮ್ಮತಿ ಎಂದು ಅಂಗೀಕರಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.
Laxmi News 24×7