ಹೊಸದಿಲ್ಲಿ: ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್, ಮಾಜಿ ಕೋಚ್ ಸಂಜಯ್ ಬಂಗಾರ್ ಅವರ ಪುತ್ರ ಇದೀಗ ಹೆಣ್ಣಾಗಿ ಬದಲಾಗಿದ್ದಾರೆ. ಸಂಜಯ್ ಬಂಗಾರ್ (Sanjay Bangar) ಮಗ ಆರ್ಯನ್ ಈಗ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ ಮಾಡಿಸಿಕೊಂಡು ‘ಟ್ರಾನ್ಸ್ ವುಮನ್’ ಅಗಿದ್ದು, ಫೋಟೊಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆರ್ಯನ್ ಬಂಗಾರ್ ಇದೀಗ ಹೆಸರು ಕೂಡಾ ಬದಲಾಯಿಸಿಕೊಂಡಿದ್ದಾರೆ. ಆರ್ಯನ್ ಇದ್ದವರು ಇದೀಗ ಅನಾಯಾ ಆಗಿದ್ದಾರೆ. ಅವರು ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಹನ್ನೊಂದು ತಿಂಗಳಾಗಿದೆ ಎಂದು ಖಚಿತಪಡಿಸಿದರು.
ಆಗಸ್ಟ್ 23 ರಂದು ಹಂಚಿಕೊಳ್ಳಲಾದ ಮತ್ತೊಂದು ಪೋಸ್ಟ್‌ನಲ್ಲಿ, ಅನಾಯಾ ಅವರು ಕ್ರಿಕೆಟ್ ಮೇಲಿನ ಪ್ರೀತಿಯನ್ನು ಕುರಿತು ಮಾತನಾಡಿದ್ದಾರೆ, ಶಸ್ತ್ರಚಿಕಿತ್ಸೆಯ ಬಳಿಕ ಕ್ರೀಡೆ ತನ್ನಿಂದ ದೂರವಾಗುತ್ತಿದೆ ಎನ್ನುವ ಬಗ್ಗೆ ಹೇಳಿದ್ದಾರೆ. ಪೋಸ್ಟ್‌ನಲ್ಲಿ, ಅವರು 12 ಟೆಸ್ಟ್ ಮತ್ತು 15 ಏಕದಿನಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಮತ್ತು 2014 ರಿಂದ 2018 ರ ಸೀಸನ್‌ವರೆಗೆ ಬ್ಯಾಟಿಂಗ್ ಕೋಚ್ ಆಗಿದ್ದ ತಮ್ಮ ತಂದೆಯಿಂದ ಹೇಗೆ ಸ್ಫೂರ್ತಿ ಪಡೆದರು ಎಂಬುದರ ಕುರಿತು ಪ್ರಸ್ತಾಪಿಸಿದ್ದಾರೆ.
Laxmi News 24×7