Breaking News

ಕಾರ್ಗಲ್ ನಾಡಕಚೇರಿಯಲ್ಲೇ ದಾಖಲೆ ಒದಗಿಸಲು ಒತ್ತಾಯ

Spread the love

ಸಾಗರ: ಕಾರ್ಗಲ್‌ನ ನಾಡಕಚೇರಿಯಲ್ಲಿನ ದಾಖಲೆಗಳು ಕಾರ್ಗಲ್‌ನಲ್ಲೆ ಸಿಗುವಂತಾಗಬೇಕು ಎಂದು ಒತ್ತಾಯಿಸಿ ಇಲ್ಲಿನ ದಲಿತ ಸಂಘರ್ಷ ಸಮಿತಿಯ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಶುಕ್ರವಾರ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

2013ನೇ ಸಾಲಿನಲ್ಲಿ ಕಾರ್ಗಲ್‌ನಲ್ಲಿ ನಾಡಕಚೇರಿ ಆರಂಭಿಸಲಾಗಿದೆ.

2019ರಲ್ಲಿ ಅಲ್ಲಿನ ನಾಡಕಚೇರಿಗೆ ನೂತನ ಕಟ್ಟಡ ಕೂಡ ಲಭ್ಯವಾಗಿದೆ. ಆದರೆ, ಪ್ರಸ್ತುತ ಆ ಕಚೇರಿ ವ್ಯಾಪ್ತಿಗೆ ಬರುವ ಗ್ರಾಮಗಳ ದಾಖಲೆಗಳು ಅಲ್ಲಿ ಲಭ್ಯವಿಲ್ಲದೆ ಇರುವುದು ಸುತ್ತಮುತ್ತಲ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ ಎಂದು ಮನವಿಯಲ್ಲಿ ಹೇಳಿದ್ದಾರೆ.

ಕಾರ್ಗಲ್ ನಾಡಕಚೇರಿ ವ್ಯಾಪ್ತಿಗೆ ಬರುವ ಗ್ರಾಮಗಳ ಜನರು ದಾಖಲೆ ಪಡೆಯಲು ಸಾಗರಕ್ಕೆ ಬರುವಂತಾಗಿದೆ. ಅರ್ಕಳ, ನಾಗವಳ್ಳಿ, ಮೇಘಾನೆ ಸೇರಿ ಹಲವು ಕುಗ್ರಾಮಗಳ ಜನರು ಭೂ ಸಂಬಂಧಿ ದಾಖಲೆಗಳನ್ನು ಪಡೆಯಲು 80 ಕಿ.ಮೀ. ಪ್ರಯಾಣಿಸಬೇಕಿದೆ. ಈ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈಗಾಗಲೇ ಹಲವು ಬಾರಿ ಕಾರ್ಗಲ್ ನಾಡಕಚೇರಿಯಲ್ಲಿ ಸಂಬಂಧಪಟ್ಟ ಗ್ರಾಮಸ್ಥರಿಗೆ ಆರ್‌ಆರ್ 5, ಆರ್‌ಆರ್ 6, ಪಹಣಿ, ಜನನ- ಮರಣ ದಾಖಲೆ ಒದಗಿಸುವಂತೆ ತಹಶೀಲ್ದಾರ್‌ಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಮುಂದಿನ 15 ದಿನಗಳೊಳಗೆ ಕಾರ್ಗಲ್‌ನಲ್ಲೇ ದಾಖಲೆ ಸಿಗುವ ವ್ಯವಸ್ಥೆ ಮಾಡದಿದ್ದರೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ಪ್ರಮುಖರಾದ ರೇವಪ್ಪ ಹೊಸಕೊಪ್ಪ, ಚಂದ್ರು, ನಾರಾಯಣ, ಪ್ರಶಾಂತ, ರವಿಕುಮಾರ್, ಮಂಜಪ್ಪ ಜನ್ನೆಹಕ್ಲು, ಮಧುಕುಮಾರ್, ಗಣಪತಿ ವಡ್ನಾಲ, ಜಗನ್ನಾಥ ಇದ್ದರು.


Spread the love

About Laxminews 24x7

Check Also

ಹುಲಿ ಸಾವಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವಿದ್ದಲ್ಲಿ ಶಿಸ್ತುಕ್ರಮ :ಈಶ್ವರ ಖಂಡ್ರೆ

Spread the loveಚಾಮರಾಜನಗರ: ಹೂಗ್ಯಂ ವಲಯದಲ್ಲಿ 5 ಹುಲಿಗಳ ಅಸಹಜ ಸಾವು ಪ್ರಕರಣದಲ್ಲಿ ಯಾವುದೇ ಅಧಿಕಾರಿಯ ನಿರ್ಲಕ್ಷ್ಯ ಕಂಡುಬಂದಲ್ಲಿ, ಶಿಸ್ತುಕ್ರಮ ಜರುಗಿಸಲಾಗುವುದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ