Breaking News

ಮಠ ಗುರುಪ್ರಸಾದ್‌ “ನಿಗೂಢ ಸಾವು”: ಇರುವ ಅನುಮಾನಗಳೇನು ?

Spread the love

ನ್ನಡ ಚಿತ್ರರಂಗದಲ್ಲಿ ಹೊಸ ಮಾದರಿಯ, ಹಾಸ್ಯ ಹಾಗೂ ಭಿನ್ನ ಸಿನಿಮಾಗಳನ್ನು ಕೊಟ್ಟಿದ್ದ ಗುರುಪ್ರಸಾದ್‌ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅವರ ಸಾವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಿನಿಮಾರಂಗದಲ್ಲಿ ಸೋಲು – ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿದವರಲ್ಲಿ ಗುರುಪ್ರಸಾದ್‌ ಅವರು ಸಹ ಒಬ್ಬರು.

 

ಗುರುಪ್ರಸಾದ್‌ ಕನ್ನಡದಲ್ಲಿ ಐದು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಗುರುಪ್ರಸಾದ್ ಕೇವಲ ನಿರ್ದೇಶಕ ಮಾತ್ರವಲ್ಲ. ಅವರು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದರು. ನಟ ಹಾಗೂ ಸಾಹಿತಿಯೂ ಹೌದು. ಕನ್ನಡದಲ್ಲಿ ಹಿಟ್‌ ಸಿನಿಮಾಗಳನ್ನು ಕೊಟ್ಟಿದ್ದ ಗುರುಪ್ರಸಾದ್‌ ಅವರು ಈಚೆಗೆ ರಂಗನಾಯಕ ಸಿನಿಮಾದ ಸೋಲಿನಿಂದ ಕುಗ್ಗಿದ್ದರು. ಆದರೆ, ಅವರ ಸಾವು ಹಲವು ಕಾರಣಗಳಿಗೆ ಅನುಮಾನವನ್ನು ಸೃಷ್ಟಿಸಿದೆ ಎನ್ನಲಾಗುತ್ತಿದೆ.

ಕೊಳತೆ ಸ್ಥಿತಿಯಲ್ಲಿ ಮೃತದೇಹ ಪತ್ತೆ: ನಿರ್ದೇಶಕ ಗುರುಪ್ರಸಾದ್‌ ಬೆಂಗಳೂರಿನ ಮಾದನಾಯಕಹಳ್ಳಿಯ ಅಪಾರ್ಟ್​ಮೆಂಟ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅವರು ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಲ್ಲದೇ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. ಆದರೆ, ಅವರು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಅವರು ಈಚೆಗೆ ಎರಡನೇ ಮದುವೆಯಾಗಿದ್ದಾರೆ ಎಂದು ಹೇಳಲಾಗಿತ್ತು. ಅವರು ಎರಡನೇ ಮದುವೆಯಾಗಿದ್ದರೆ, ಅವರ ಪತ್ನಿ ಅವರೊಂದಿಗೆ ಇರಲಿಲ್ಲವೇ ಎನ್ನುವ ಅನುಮಾನ ಮೂಡಿದೆ.

ಅಲ್ಲದೇ, ಅಪಾರ್ಟ್‌ಮೆಂಟ್‌ನಲ್ಲಿ ಅವರ ಶವ ಕೊಳೆಯುವ ಹಂತಕ್ಕೆ ಹೋಗಿದ್ದರೂ, ಯಾರು ನೋಡಿರಲಿಲ್ಲವೇ ಎನ್ನುವ ಪ್ರಶ್ನೆ ಎದುರಾಗಿದೆ. ರಂಗನಾಯಕ ಸಿನಿಮಾ ಸೋಲು ಕಂಡ ಮೇಲೆ ಅವರು ಕುಗ್ಗಿದ್ದರು ಎನ್ನಲಾಗಿದೆ. ಆದರೆ, ಸಿನಿಮಾದಲ್ಲಿ ಸೋಲು – ಗೆಲುವು ಸಹಜ. ಅದು ನಿರ್ದೇಶಕರಾಗಿದ್ದ ಗುರುಪ್ರಸಾದ್‌ ಅವರಿಗೆ ಇದು ಗೊತ್ತಿಲ್ಲದೆ ಏನು ಇಲ್ಲ.

ಕುಗ್ಗುವ ವ್ಯಕ್ತಿತ್ವ ಅಲ್ಲ: ಗುರುಪ್ರಸಾದ್‌ ಅವರದ್ದು ಕುಗ್ಗುವ ವ್ಯಕ್ತಿತ್ವ ಆಗಿರಲಿಲ್ಲ. ಸಿನಿ ಜರ್ನಿಯಲ್ಲಿ ಸೋಲು – ಗೆಲುವುಗಳನ್ನು ಕಂಡಿದ್ದವರು. ರಂಗನಾಯಕ ಸಿನಿಮಾ ಸೋತ ಮೇಲೆ ಅವರು ಸ್ವಲ್ಪ ಮನನೊಂದಿದ್ದು, ಚಿತ್ರರಂಗದಿಂದ ಸಣ್ಣ ಬ್ರೇಕ್‌ ತೆಗೆದುಕೊಂಡಿದ್ದರು ಎನ್ನುವುದೆಲ್ಲ ಒಪ್ಪಬಹುದು. ಆದರೆ, ಅವರು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಾಗಿರಲಿಲ್ಲ ಎನ್ನುವುದು ಅವರ ಆಪ್ತ ವಲಯದ ಮಾತು. ಇನ್ನು ಗುರುಪ್ರಸಾದ್‌ ಅವರು ನಿರ್ದೇಶಕ ಮಾತ್ರವಲ್ಲ. ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು.

mysterious death: ನಿರ್ಮಾಪಕರಾದವರಿಗೆ ಸಿನಿಮಾಗಳ ಬಂಡವಾಳದ ನಾಡಿ ಮಿಡಿತ ಚೆನ್ನಾಗಿಯೇ ಗೊತ್ತಿರುತ್ತದೆ. ಹೀಗಾಗಿ, ಸಿನಿಮಾಗಳ ಸೋಲು ಅವರನ್ನು ಅಷ್ಟೊಂದು ಹಾಳವಾಗಿ ಪ್ರಭಾವಿಸುವ ಸಾಧ್ಯತೆ ಕಡಿಮೆ. ಅಂದರೆ ಆತ್ಮಹತ್ಯೆಗೆ ಶರಣಾಗುವಷ್ಟು ಎಂದೂ ಹೇಳಲಾಗುತ್ತಿದೆ. ಅಲ್ಲದೇ ಅವರು ಸಾಹಿತಿ ಸಹ ಆಗಿದ್ದರು. ಸಾಕಷ್ಟು ಓದಿ ತಿಳಿದುಕೊಂಡಿದ್ದರು. ಅವರ ಚಿತ್ರಗಳಲ್ಲಿ ಜೀವನದಲ್ಲಿ ಸೋತು ಕೊನೆಯಲ್ಲಿ ಗೆಲ್ಲುವ ನಾಯಕ ಪಾತ್ರ ಸೃಷ್ಟಿಸಿದ್ದರು. ಈ ರೀತಿಯ ಗಟ್ಟಿ ಸಿನಿಮಾಗಳನ್ನು ಕಟ್ಟಿದವರು ಆತ್ಮಹತ್ಯೆಗೆ ಶರಣಾಗಲು ಸಾಧ್ಯವೇ ಎನ್ನುವುದು ಈಗ ಇರುವ ಬಹದೊಡ್ಡ ಪ್ರಶ್ನೆಯಾಗಿದೆ.


Spread the love

About Laxminews 24x7

Check Also

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

Spread the love ನವದೆಹಲಿ: ಇತ್ತೀಚೆಗೆ ಕೃತಕ ಬುದ್ಧಿಮತ್ತೆ(ಎಐ) ಚಾಲಿತ ರೊಬೋಟ್‌ ಒಂದು ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿತ್ತು. ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ