Breaking News

ಅಳ್ನಾವರ: ಧಾರಾಕಾರ ಮಳೆ

Spread the love

ಳ್ನಾವರ: ಬುಧವಾರ ಸಂಜೆ ಏಕಾಎಕಿ ಸುರಿದ ಮಳೆಯಿಂದ ರಕ್ಷಿಸಿಕೊಳ್ಳಲು ಹೊರ ವಲಯದ ಹೊಲ ಗದ್ದೆಗಳಲ್ಲಿ ಹಾಗೂ ರಾಶಿ ಹಾಕಿದ್ದ ಫಸಲನ್ನು ರಕ್ಷಿಲು ರೈತರು ಪರದಾಡಿದರು.

ಸುಮಾರು ಒಂದು ತಾಸು ಧಾರಾಕಾರ ಮಳೆ ಸುರಿಯಿತು. ಪಟ್ಟಣದ ತೆಗ್ಗು ಪ್ರದೇಶದ ಬಡಾವಣೆಗಳು ಜಲಾವೃತಗೊಂಡಿದ್ದವು.

ಇಂದಿರಾ ನಗರ ಹಾಗೂ ನೆಹರೂ ನಗರ ಬಡಾವಣೆ ಹಾಗೂ ಮಿಲ್ಲತ್ ಶಾಲೆಯ
ಹತ್ತಿರದ ರಸ್ತೆಗಳಲ್ಲಿ ನೀರು ನಿಂತಿತ್ತು. ಚರಂಡಿಗಳು ತುಂಬಿ ಹರಿದವು.

‌ಎಪಿಎಂಸಿ ಆವರಣದಲ್ಲಿ ಗೋವಿನ ಜೋಳ ಒಣಗಿಸಲು ಹಾಕಿದ ಪೈರನ್ನು ರಕ್ಷಿಸಲು ರೈತ ತಾಡಪತ್ರೆ ಹೊದಿಕೆ ಹಾಕಿ ಫಸಲನ್ನು ರಕ್ಷಸಿಕೊಂಡರು. ಮಳೆಯ ರಭಸಕ್ಕೆ ಹಲವಡೆ ಭತ್ತದ ಪೈರು ನೆಲಕ್ಕುರುಳಿದೆ. ‌ ದೀಪಾವಳಿ ಹಬ್ಬದ ಸಿದ್ದತೆಗೂ ಮಳೆ ಅಡ್ಡಿಯಾಗಿದೆ.


Spread the love

About Laxminews 24x7

Check Also

ಶಾಲಾ ತರಗತಿ ಕೊಠಡಿಗಳನ್ನು ಉದ್ಘಾಟಿಸಿದ ರಾಹುಲ್  ಜಾರಕಿಹೊಳಿ

Spread the loveಇವತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ