Breaking News

2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, 69 ಸಾಧಕರಿಗೆ ಪ್ರಶಸ್ತಿ

Spread the love

ಬೆಂಗಳೂರು: 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Award) ಪ್ರಕಟವಾಗಿದ್ದು, ಈ ಬಾರಿ 69 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಇಂದು (ಅ.30) ಪ್ರಕಟಿಸಿದೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಟ್ಟು 69 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನವೆಂಬರ್‌ 01 ರಂದು ವಿಧಾನಸೌಧ ಮುಂಭಾಗದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗೆ ಆಯ್ಕೆಯಾದವರಿಗೆ ತಲಾ 5 ಲಕ್ಷ ರೂ. ಹಾಗೂ 20 ಗ್ರಾಂ ಚಿನ್ನ ನೀಡಿ ಸನ್ಮಾನಿಸಲಾಗುವುದು. ಅಷ್ಟೇ ಅಲ್ಲದೇ ಕರ್ನಾಟಕ ಸುವರ್ಣ ಮಹೋತ್ಸವ ಅಂಗವಾಗಿ ನಾಡಿನ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ 100 ಸಾಧಕರಿಗೂ ಕೂಡ ಇದೇ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ. 50 ಪುರುಷ ಸಾಧಕರು ಹಾಗೂ 50 ಮಹಿಳಾ ಸಾಧಕರಿಗೆ ತಲಾ 50 ಸಾವಿರ ರೂ. ಹಾಗೂ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

ಇನ್ನು 2024-25ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸಾಧಕರ ಪಟ್ಟಿ ಈ ಕೆಳಗಿನಂತಿದೆ.

ಜಾನಪದ

ಶ್ರೀಇಮಾಮಸಾಬ ಎಮ್ ವಲ್ಲೆಪನವರ
ಶ್ರೀ ಅಶ್ವ ರಾಮಣ್ಣ
ಶ್ರೀ ಕುಮಾರಯ್ಯ
ಶ್ರೀ ವೀರಭದ್ರಯ್ಯ
ಶ್ರೀ ನರಸಿಂಹಲು (ಅಂಧ ಕಲಾವಿದ)
ಶ್ರೀ ಬಸವರಾಜ ಸಂಗಪ್ಪ ಹಾರಿವಾಳ
ಶ್ರೀಮತಿ ಎಸ್ ಜಿ ಲಕ್ಷ್ಮೀದೇವಮ್ಮ
ಶ್ರೀ ಪಿಚ್ಚಳ್ಳಿ ಶ್ರೀನಿವಾಸ
ಶ್ರೀ ಲೋಕಯ್ಯ ಶೇರ (ಭೂತಾರಾಧನೆ)

ಚಲನಚಿತ್ರ /ಕಿರುತೆರೆ

ಶ್ರೀಮತಿ ಹೇಮಾ ಚೌದರಿ
ಶ್ರೀ.ಎಂ. ಎಸ್. ನರಸಿಂಹಮೂರ್ತಿ

ಸಂಗೀತ

ಶ್ರೀ ಪಿ ರಾಜಗೋಪಾಲ
ಶ್ರೀ ಎ.ಎನ್ ಸದಾಶಿವಪ್ಪ

ನೃತ್ಯ

ಶ್ರೀಮತಿ ವಿದುಷಿ ಲಲಿತಾ ರಾವ್

ಆಡಳಿತ

ಶ್ರೀ ಎಸ್.‌ ವಿ. ರಂಗನಾಥ್‌ ಭಾ.ಆ.ಸೇ (ನಿ)

ವೈದ್ಯಕೀಯ

ಡಾ. ಜಿ.ಬಿ. ಬಿಡಿನಹಾಳ
ಡಾ. ಮೈಸೂರು ಸತ್ಯನಾರಾಯಣ
ಡಾ ಲಕ್ಷ್ಮಣ್ ಹನುಮಪ್ಪ ಬಿದರಿ

ಸಮಾಜಸೇವೆ

ಶ್ರೀ ವೀರಸಂಗಯ್ಯ
ಶ್ರೀ ಹೀರಾಚಂದ್‍ ವಾಗ್ಮಾರೆ
ಶ್ರೀಮತಿ ಮಲ್ಲಮ್ಮ ಸೂಲಗಿತ್ತಿ
ಶ್ರೀ ದಿಲೀಪ್ ಕುಮಾರ್

ಸಂಕೀರ್ಣ

ಶ್ರೀ ಹುಲಿಕಲ್ ನಟರಾಜ
ಡಾ|| ಹೆಚ್.ಆರ್.‌ ಸ್ವಾಮಿ
ಆ.ನ ಪ್ರಹ್ಲಾದ ರಾವ್
ಶ್ರೀ ಕೆ. ಅಜೀತ್ ಕುಮಾರ್ ರೈ
ಇರ್ಫಾನ್ ರಜಾಕ್ (ವಾಸ್ತುಶಿಲ್ಪ)
ಶ್ರೀ ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ

ಹೊರದೇಶ-ಹೊರನಾಡು

ಶ್ರೀ ಕನ್ಹಯ್ಯ ನಾಯ್ಡು
ಡಾ. ತುಂಬೆ ಮೊಹಿಯುದ್ದೀನ್‌
ಶ್ರೀ ಚಂದ್ರಶೇಖರ ನಾಯಕ್

ಪರಿಸರ

ಶ್ರೀಮತಿ ಆಲ್ಮಿತಾ ಪಟೇಲ್​

ಸಾಹಿತ್ಯ

ಶ್ರೀಮತಿ ಬಿ.ಟಿ.ಲಲಿತಾ ನಾಯಕ್
ಅಲ್ಲಮಪ್ರಭು ಬೆಟ್ಟದೂರು
ಡಾ.ಎಮ್.ವೀರಪ್ಪ ಮೊಯ್ಲಿ
ಹನುಮಂತರಾವ್ ದೊಡ್ಡಮನಿ
ಡಾ.ಬಾಳಾಸಾಹೇಬ್ ಲೋಕಾಪುರ
ಬೈರಮಂಗಲರಾಮೇಗೌಡ
ಡಾ. ಪ್ರಶಾಂತ್ ಮಾಡ್ತಾ


Spread the love

About Laxminews 24x7

Check Also

ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ​ ತೀರ್ಮಾನಕ್ಕೆ ನಾನು ಬದ್ಧ: ಸಿಎಂ

Spread the loveಮೈಸೂರು: “ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ ಮತ್ತು ಹೈಕಮಾಂಡ್​ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡುತ್ತಾರೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ