Breaking News

ಗಮನಸೆಳೆದ ಜಾನಪದ ಕಲಾಮೇಳ ಮೆರವಣಿಗೆ

Spread the love

ಬೈಲಹೊಂಗಲ: ವೀರರಾಣಿ ಕಿತ್ತೂರು ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆ ಅಂಗವಾಗಿ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಬೆಳಗಾವಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳವಾರ ಪಟ್ಟಣದಲ್ಲಿ ಆಯೋಜಿಸಿದ್ದ ಬೈಲಹೊಂಗಲ ಉತ್ಸವದ ಜಾನಪದ ಕಲಾಮೇಳ, ರೂಪಕಗಳ ಮೆರವಣಿಗೆ ಗಮನ ಸೆಳೆಯಿತು.

 

ಕಿತ್ತೂರು ಚನ್ನಮ್ಮನ ವೃತ್ತದಿಂದ ಆರಂಭವಾದ ಕಲಾಮೇಳ ಮೆರವಣಿಗೆ ಎಪಿಎಂಸಿ ಗಣೇಶ ದೇವಸ್ಥಾನ, ಇಂಚಲ ಕ್ರಾಸ್‌, ಬಸ್‌ ನಿಲ್ದಾಣ, ರಾಯಣ್ಣ ವೃತ್ತ ಮಾರ್ಗ ವಾಗಿ ಚನ್ನಮ್ಮನ ಸಮಾಧಿ  ಸ್ಥಳಕ್ಕೆ ಬಂದು ತಲುಪಿತು. ಮಹಿಳೆಯರ ಬೆ„ಕ್‌ ರ್ಯಾಲಿಗೆ ಉಪವಿಭಾಗಾ ಧಿಕಾರಿ ಪ್ರಭಾವತಿ ಫಕೀರಪೂರ ಕನ್ನಡ ಬಾವುಟ ತೋರಿಸಿ ಚಾಲನೆ ನೀಡಿದರು. ಅನಿತಾ ಹೋಟಿ, ಮೀನಾಕ್ಷಿ ಕುಡಸೋಮಣ್ಣವರ ಮಹಿಳೆಯರ ಬೈಕ್‌ ರ್ಯಾಲಿ ನೇತೃತ್ವ ವಹಿಸಿದ್ದರು.

ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಮಹಾಂತೇಶ ಕೌಜಲಗಿ, ತಹಶೀಲ್ದಾರ್‌ ಎಚ್‌.ಎನ್‌. ಶಿರಹಟ್ಟಿ, ಮುಖ್ಯಾ ಧಿಕಾರಿ ವಿರೇಶ ಹಸಬಿ, ಲಿಂಗಾಯತ ಪಂಚಮಸಾಲಿ ತಾಲೂಕು ಘಟಕ ಅಧ್ಯಕ್ಷ ಶ್ರೀಶೈಲ ಬೋಳನ್ನವರ, ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರುಗೇಶ ಗುಂಡ್ಲೂರ, ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ, ನ್ಯಾಯವಾದಿ ಎಫ್‌.ಎಸ್‌.ಸಿದ್ದನಗೌಡರ, ಕಲಾವಿದ ಸಿ.ಕೆ. ಮೆಕ್ಕೇದ, ಮುಖಂಡರಾದ ಮಡಿವಾಳಪ್ಪ ಹೋಟಿ, ಮಹಾಂತೇಶ ಮತ್ತಿಕೊಪ್ಪ, ಶಂಕರ ಮಾಡಲಗಿ, ಮಹೇಶ ಹರಕುಣಿ, ವಿಠಲ ಕಡಕೋಳ, ರಿತೇಶ ಪಾಟೀಲ, ಕನ್ನಡಪರ
ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಕಿತ್ತೂರು ರಾಣಿ ಚನ್ನಮ್ಮ ಸ್ಮರಣೋತ್ಸವ ಸಮಿತಿ ಸದಸ್ಯರು, ಅಭಿಮಾನಿಗಳು, ಅನೇಕರು ಇದ್ದರು.

ಗಣಾಚಾರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು, ತಾಲೂಕು ಆಡಳಿತ, ತಾಪಂ, ಶಿಶು ಅಭಿವೃದ್ಧಿ ಇಲಾಖೆಯ ಕಿತ್ತೂರು ಸಂಸ್ಥಾನದ ಆಡಳಿತ ಮಂಡಳಿ ಸಭಾಂಗಣ ರೂಪಕ, ಬಸವೇಶ್ವರ ಜಗ್ಗಲಗಿ ಮೇಳ, ಕಲ್ಲೊಳ್ಳಿ ಪುರವಂತರ ವೀರಗಾಸೆ, ಗದ್ದಿಕರವಿನಕೊಪ್ಪ ಬೀರದೇವರ ಡೊಳ್ಳು ತಂಡ, ಗಂದಿಗವಾಡ ಕರಡಿ ಮಜಲು, ಸುಳ್ಳದ ಮಹಿಳಾ ಡೊಳ್ಳು ಕುಣಿತ, ಮಹಿಳೆಯರ ಪೂರ್ಣಕುಂಭಮೇಳ, ಕಲ್ಲೊಳ್ಳಿ ವೀರಗಾಸೆ, ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಈಶ್ವರಿ ಪಾಟೀಲರ ಚನ್ನಮ್ಮನ ರೂಪಕ, ಮಾಜಿ ಸೈನಿಕರು, ಎನ್‌ಸಿಸಿ, ಸ್ಕೌಟ್ಸ್‌, ಗೈಡ್ಸ್‌, ವಿವಿಧ ಕಲಾಮೇಳಗಳು ನೋಡುಗರ ಗಮನ ಸೆಳೆದವು.


Spread the love

About Laxminews 24x7

Check Also

ಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ.

Spread the loveಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ. ನಂದಿಹಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ