Breaking News

ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ.

Spread the love

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ಹೋರಾಟ ರೈತ ಮಕ್ಕಳಿಗೆ ಮೀಸಲು ನ್ಯಾಯ ಒದಗಿಸುವ ಹೋರಾಟವಾಗಿದೆ. ಸಾಮಾಜಿಕ ನ್ಯಾಯ, ಮೀಸಲು ಬಗ್ಗೆ ಸಕಾರಾತ್ಮಕ ಚಿಂತನೆ ಹೊಂದಿದ ಮುಖ್ಯಮಂತ್ರಿಯವರು ಮೀಸಲು ಬೇಡಿಕೆಗೆ ಕಾಲಮಿತಿ ಕ್ರಮದ ಭರವಸೆ ನೀಡದಿರುವುದು ಬೇಸರ-ನೋವು ತರಿಸಿದೆ.

ಸಮಾಜದ ಕೆಲವರು ಮೀಸಲು ಹೋರಾಟವನ್ನು ಟ್ರಂಪ್‌ಕಾರ್ಡ್‌ ಆಗಿಸಿಕೊಂಡು ಅಧಿಕಾರಕ್ಕೇರಿ, ಹೋರಾಟವನ್ನೇ ಮರೆತಿದ್ದಾರೆ, ಮೌನ ತಾಳಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಸರಕಾರ 2ಡಿ ಮೀಸಲು ನೀಡಲು ಮುಂದಾದರೂ, 2ಎ ಮೀಸಲು ಹೋರಾಟ ಜೀವಂತವಾಗಿರಿಸಿ 2ಡಿ ಮೀಸಲು ಒಪ್ಪಿಕೊಳ್ಳಲು ಸಮಾಜ ಸಿದ್ಧವಿದೆ ಎನ್ನುತ್ತಾರೆ

ಪಂಚಮಸಾಲಿ ಸಮಾಜದ ಮೀಸಲು ಹೋರಾಟ ಮುಂದಿನ ಹೆಜ್ಜೆ ಏನು?
ಮುಖ್ಯಮಂತ್ರಿ ಅವರಿಂದ ನಮ್ಮ ಬೇಡಿಕೆಗೆ ಕಾಲಮಿತಿ ನಿಗದಿಯ ಸೂಕ್ತ ಭರವಸೆ ದೊರೆಯದಿರುವುದು ನೋವು ತರಿಸಿದೆ. ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದ ಮೊದಲ ದಿನವೇ ಸುಮಾರು 10 ಲಕ್ಷ ಜನರೊಂದಿಗೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ. ವಿವಿಧ ಹಂತದ ಹೋರಾಟ ಮುಂದುವರೆಸುತ್ತೇವೆ. ನ್ಯಾಯ ಸಿಗುವ ತನಕ ಯಾವ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ.


Spread the love

About Laxminews 24x7

Check Also

ಆರೋಗ್ಯ ಮತ್ತು ಫಿಟ್ನೆಸ್ ಕಡೆ ಗಮನ ಹರಿಸಿದರೆ ಜೀವನದಲ್ಲಿ ಸದಾಕಾಲ ಸಂತೋಷದಿಂದ ಇರಬಹುದು ಎಂದು ಮೈಸೂರಿನಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೇಳಿದರು.

Spread the loveಮೈಸೂರು: ಜೀವನದಲ್ಲಿ ಸಂಪಾದನೆ ಮುಖ್ಯ. ಅದರೆ ಜೊತೆಯಲ್ಲಿ ನೆಮ್ಮದಿಯಾಗಿರಲು ಆರೋಗ್ಯವನ್ನೂ ಸಂಪಾದಿಸಬೇಕು ಎಂದು ಬಾಲಿವುಡ್ ನಟಿ ಶಿಲ್ಪ ಶೆಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ