ಗೋಕಾಕ: ‘ಪ್ರಕೃತಿ ಇಲ್ಲದೇ ಮಾನವನ ಬದುಕು ಅಸಾಧ್ಯ. ಪ್ರಕೃತಿಯನ್ನು ಪುಸ್ತಕದಲ್ಲಿ ನೋಡುವ ಬದಲು ಕಣ್ತೆರೆದು ನೋಡಿದರೆ ಅರ್ಥವಾಗುತ್ತದೆ’ ಎಂದು ಧಾರವಾಡದ ಪಕ್ಷಿ ತಜ್ಞ ಪ್ರಕಾಶ ಗೌಡರ ಹೇಳಿದರು.
ಇಲ್ಲಿನ ಲಕ್ಷ್ಮೀ ಎಜ್ಯುಕೇಷನ್ ಟ್ರಸ್ಟ್ ಸಭಾ ಭವನದಲ್ಲಿ ಘಟಪ್ರಭಾದ ಪ್ರಾದೇಶಿಕ ಅರಣ್ಯ ವಿಭಾಗ, ಪ್ರಾದೇಶಿಕ ಅರಣ್ಯ ವಲಯ ಹಾಗೂ ಲಕ್ಷ್ಮಣರಾವ ಜಾರಕಿಹೊಳಿ ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ವಲಸೆ ಪಕ್ಷಿಗಳ ದಿನಾಚರಣೆ ನಿಮಿತ್ತ ಪಕ್ಷಿ ಹಾಗೂ ಕೀಟ ರಕ್ಷಿಸಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
‘ಪಕ್ಷಿಗಳು ಆಹಾರ, ವಾಸಸ್ಥಳ, ಸಂತಾನೋತ್ಪತ್ತಿ, ರಕ್ಷಣೆ ಹಾಗೂ ಹವಾಮಾನಗಳ ಕಾರಣದಿಂದ ಸಾವಿರಾರು ಕಿ.ಮೀ ದೂರ ಕ್ರಮಿಸಿ ವಲಸೆ ಹೋಗುತ್ತವೆ. ಅಂತಹ ಪಕ್ಷಿಗಳಿಗೆ ಸೂಕ್ತ ವಾತಾವರಣ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಪರಿಸರ ನಾಶದಿಂದ ಪಕ್ಷಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪರಿಸರ ರಕ್ಷಿಸಿ, ಪ್ರಾಣಿ ಪಕ್ಷಿಗಳ ಸಂಕುಲಗಳನ್ನು ಮುಂದಿನ ಪೀಳಿಗೆಗೆ ನೀಡಬೇಕು’ ಎಂದು ಹೇಳಿದರು.
Laxmi News 24×7