Breaking News

ಬೆಳಗಾವಿ ನಗರದಲ್ಲಿ ಎರಡು ಕಡೆ ಸಿಐಡಿ ದಾಳಿ ಬೈಕ್, ಅಪಾರ ಪ್ರಮಾಣದ ಗಾಂಜಾ ಜಪ್ತು

Spread the love

ಬೆಳಗಾವಿ ನಗರದಲ್ಲಿ ಎರಡು ಕಡೆ ದಾಳಿ ನಡೆಸಿರುವ ಸಿಐಡಿ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿ ಎರಡು ಬೈಕ್ ಗಳನ್ನು ವಶಕ್ಕೆ ಪಡೆದು ಅಪಾರ ಪ್ರಮಾಣದ ಗಾಂಜಾ ಜಪ್ತು ಮಾಡಿದ್ದಾರೆ.

ಸಿಐಡಿ ಬೆಳಗಾವಿ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್
.ಎಸ್.ಕೆ.ಕುರಗೊಡಿ, ರವರಿಗೆ ಬಂದ ಮಾಹಿತಿ ಮೇರೆಗೆ ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್
ಠಾಣಾ ಸರಹದ್ದಿನ ಅಯೋಧ್ಯ ನಗರದಲ್ಲಿರುವ ಯು.ಕೆ.27 ಹೋಟೆಲ್ ಹತ್ತಿರ ಗಾಂಜಾ ಮಾರಾಟದಲ್ಲಿ
ತೊಡಗಿದ್ದ ಆಕೀಬ್ ಜಾವೀದ್ ದುನಿಯಾರ್ ತಂದೆ ಜಾವೀದ್ ಮನಿಯಾರ್, 27 ವರ್ಷ, ಈತನಿಗೆ
ಹಿಡಿದಿದ್ದು ಈತನಿಂದ 610 ಗ್ರಾಂ ಗಾಂಜಾ ಆಂದಾಜು ಕಿಮ್ಮತ್ತು ರೂ.12,200/- ಒಂದು ದ್ವಿಚಕ್ರ
ವಾಹನ ನಗದು ಹಣ ರೂ 530/- ಜಪ್ತು ಮಾಡಿದ್ದಾರ

ಬೆಳಗಾವಿ ನಗರದ ಬೋಗಾರವೆಸ್
ಧರ್ಮವೀರ ಸಂಭಾಜಿ ಸರ್ಕಲ್ ಹತ್ತಿರ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಸೈಪ್‌ಅಲಿ ಮಾಡಿವಾಲೆ
ಸಾ|| ಆನಸಾರ ಗಲ್ಲಿ, ಪೀರಣವಾಡಿ, ಬೆಳಗಾವಿ ವಯಸ್ಸು 27 ವರ್ಷ ಈತನಿಗೆ ಹಿಡಿದಿದ್ದು ಈತನಿಂದ
520 ಗ್ರಾಂ ಗಾಂಜಾ ಆಂದಾಜು ಕಿಮ್ಮತ್ತು ರೂ.10,400/- ಒಂದು ದ್ವಿಚಕ್ರ ವಾಹನ ಹಾಗು ನಗದು
ಹಣ ರೂ.720/- ಜಪ್ತು ಮಾಡಿದ್ದು ಈ ಕುರಿತು ಬೆಳಗಾವಿ ನಗರದ ಸಿಐಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಲಕ್ಷ್ಮಣ ಹುಂಡರದ, ಡಿಟೆಕ್ಟಿವ್ ಸಬ್‌ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿಯವರಾದ
ಜಗದೀಶ ಎಂ ಬಾಗನವರ, ಜಿ.ಆರ್.ಶಿರಸಂಗಿ, ಚಿದಂಬರ ಚಟ್ಟರಕ್ಕಿ ರವರು ಭಾಗವಹಿಸಿರುತ್ತಾರೆ.


Spread the love

About Laxminews 24x7

Check Also

ಘೋಡಗೇರಿ ಜಿ.ಪಂ ವ್ಯಾಪ್ತಿಯ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಪ್ರಚಾರ ಸಭೆ

Spread the loveಘೋಡಗೇರಿ ಜಿ.ಪಂ ವ್ಯಾಪ್ತಿಯ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಪ್ರಚಾರ ಸಭೆ ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿಗೋಡಬೇಡಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ