ಕಲಬುರಗಿ: ರಾಜ್ಯದಲ್ಲಿ ಕದ್ದ ಮಾಲು ವಾಪಸ್ಸು ಕೊಡುವ ಟ್ರೆಂಡ್ ಶುರುವಾಗಿದ್ದು, ಕದ್ದ ಮಾಲನ್ನ ವಾಪಸ್ ಕೊಟ್ಟರೆ ಅದನ್ನ ಸಾಕ್ಷಿಯಾಗಿ ಪರಿಗಣಿಸ್ತಾರೆ. ಮುಡಾ ಪ್ರಕರಣದಲ್ಲಿ ಸಿಎಂ ಪತ್ನಿ ನಿವೇಶನ ವಾಪಸ್ಸು ಕೊಟ್ಟರೆ ಖರ್ಗೆ ಒಡೆತದನ ಸಿದ್ದಾರ್ಥ ಟ್ರಸ್ಟ್ ಗೆ ನೀಡಲಾದ ಜಮೀನು ವಾಪಸ್ ಕೊಟ್ಟಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು.
ವಿಜಯಪುರಕ್ಕೆ ತೆರಳು ಮುನ್ನ ಇಲ್ಲಿನ ವಿಮನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತ್ಮಸಾಕ್ಷಿ ಬಗ್ಗೆ ಮಾತಾಡುವ ಇವರು ಒಂದು ಕೇಸ್ ವಾಪಸ್ ಪಡೆಯಲು ಒಬ್ಬ ವ್ಯೆಕ್ತಿಗೆ ಎಷ್ಟು ಕೊಟ್ಟಿದ್ದಾರೆ ಅಂತಾ ಗೊತ್ತಿದೆ. ಸಮಯ ಬಂದಾಗ ಅದನ್ನ ಬಹಿರಂಗಪಡಿಸುತ್ತೇನೆ. ಕೇಸ್ ವಾಪಸ್ ಪಡೆಯಲು ಯಾವ ಹಂತಕ್ಕೆ ಹೋಗಿದ್ದಾರೆ ಎಂಬುದು ಸಹ ಗೊತ್ತಿದೆ. ನ್ಯಾಯಾಂಗ ವ್ಯವಸ್ಥೆಯಲ್ಲೂ ಕೂಡ ಖರೀದಿ ಮಾಡಬಹುದು ಅಂತಾ ಅಂದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Laxmi News 24×7