ಬೆಳಗಾವಿ: ಹುಲಿ, ಸಿಂಹದ ರೀತಿಯಲ್ಲಿ ಗುಡುಗುತ್ತೇವೆ ಎಂದಿದ್ದ ಲಕ್ಷ್ಮೀ ಹೆಬ್ಬಾಳಕರ ಈಗ ಮಂತ್ರಿ ಆದ ಮೇಲೆ ತಣ್ಣಗಾಗಿದ್ದಾರೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಬ್ಬಾಳಕರ ಅವರು ನಮಗೆ ಸಿಎಂ ಭೇಟಿ ಮಾಡಿಸಿಲ್ಲ.
ಸ್ಪೀಕರ್‌ಗೆ ಮನವಿ ಮಾಡಿದ್ದಾಗಿ ಶಾಸಕರು ಹೇಳಿದ್ದರು. ಅಲ್ಲಿ ಹೋಗಿ ಕೇಳಿದರೆ ಯಾರೂ ನಿಮ್ಮವರು ಬಂದಿಲ್ಲ ಎಂದು ಸ್ಪೀಕರ್ ಹೇಳಿದರು. ಇದರಲ್ಲಿ ಯಾರನ್ನು ನಂಬುವುದು, ಯಾರನ್ನು ಬಿಡುವುದು. ಈ ಹಿಂದೆ ಹೇಗೆ ಮೈ ಚಳಿ ಬಿಟ್ಟು ಮಾತನಾಡುತ್ತಿದ್ದ ಹೆಬ್ಬಾಳಕರ ಈಗ ಸಚಿವರಾಗಿರುವ ಕಾರಣಕ್ಕೆ ಮಾತನಾಡಲು ಮುಜುಗರ ಆಗಬಹುದು. ಅವರದ್ದದೇ ಸರ್ಕಾರ ಇರುವ ಕಾರಣ ತೊಂದರೆ ಆಗಬಹುದು ಎಂದರು.
Laxmi News 24×7