ನಟ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆಯಿಂದ ಹೊರ ಬರಲು ನಿರ್ಧರಿಸಿದ್ದಾರೆ. ಇದೇ ನನ್ನ ಕೊನೆಯ ಬಿಗ್ ಬಾಸ್, ಮುಂದಿನ ಸೀಸನ್‌ನಲ್ಲಿ ನಾನು ನಿರೂಪಣೆ ಮಾಡುವುದಿಲ್ಲ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದರು. ಕಾರ್ಯಕ್ರಮ ನಿರೂಪಣೆ ಮಾಡದೇ ಇರಲು ಕಾರಣವನ್ನು ನೀಡದೇ ಇದ್ದರು ಅವರ ದಿಢೀರ್ ನಿರ್ಧಾರ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.

11 ಆವೃತ್ತಿಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ಸುದೀಪ್ ಯಶಸ್ವಿಯಾಗಿ ನಿರೂಪಣೆ ಮಾಡಿದ್ದಾರೆ. ಸುದೀಪ್‌ಗಾಗಿ ಅಪಾರ ವೀಕ್ಷಕರು ಬಿಗ್ ಬಾಸ್ ಕಾರ್ಯಕ್ರಮ ನೋಡುತ್ತಾರೆ. 11ನೇ ಆವೃತ್ತಿಯಲ್ಲೇ ಸುದೀಪ್ ಇರುವುದಿಲ್ಲ ಬೇರೊಬ್ಬರು ನಿರೂಪಣೆ ಮಾಡುತ್ತಾರೆ ಎನ್ನಲಾಗಿತ್ತು, ಆದರೆ ಸುದೀಪ್ ಅವರೇ ಈ ಆವೃತ್ತಿಯಲ್ಲೂ ನಿರೂಪಣೆ ಮಾಡುವುದು ಟೀಸರ್ ಬಳಿಕ ಖಚಿತವಾಗಿತ್ತು.
ಬಿಗ್ ಬಾಸ್ 11ನೇ ಸೀಸನ್ ಆರಂಭದಲ್ಲೇ ಸೂಪರ್ ಹಿಟ್ ಆಗಿದೆ. 9.9 ಟಿವಿಆರ್ ಪಡೆದಿಕೊಂಡಿದೆ, ಈ ಸಂತಸದ ನಡುವೆಯೇ ಸುದೀಪ್ ಹೊರಬರುವ ನಿರ್ಧಾರದ ಹಿಂದೆ ಬಲವಾದ ಕಾರಣವಿದೆ ಎನ್ನಲಾಗಿತ್ತು. ಸುದೀಪ್ ಬೇಸರಗೊಂಡು ನಿರ್ಧಾರ ಮಾಡಿದ್ದಾರೆ ಎನ್ನುವ ಅನುಮಾನವಿತ್ತು, ಈಗ ಅದು ನಿಜ ಆಗಿದೆ. ಬಿಗ್ ಬಾಸ್ ಮಾಜಿ ಸ್ಪರ್ಧಿ, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಸುದೀಪ್ ನಿರ್ಧಾರದ ಹಿಂದಿನ ಕಾರಣ ತಿಳಿಸಿದ್ದಾರೆ.
Laxmi News 24×7