ವಿಜಯಪುರ: ಜಾಮೀನು ಮೇಲೆ ಬಿಡುಗಡೆಯಾಗಿರುವ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಾದ ಜಿಲ್ಲೆಯ ಪರಶುರಾಮ ವಾಘ್ಮೋರೆ ಮತ್ತು ಮನೋಹರ್ ಯಡವೆಯನ್ನು ಹಿಂದೂಪರ ಸಂಘಟನೆ ಮುಖಂಡರು ಸಮ್ಮಾನಿಸುವುದರೊಂದಿಗೆ ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ.
ಬೆಂಗಳೂರಿನಲ್ಲಿ 2017ರ ಸೆ.
5ರಂದು ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ವಿಜಯಪುರ ತಾಲೂಕಿನ ರತ್ನಾಪೂರ ಗ್ರಾಮದ ಮನೋಹರ ಯಡವೆ, ಸಿಂದಗಿ ತಾಲೂಕಿನ ಪರಶುರಾಮ ವಾಘ್ಮೋರೆ ಅವರನ್ನು ಬಂಧಿಸಲಾಗಿತ್ತು. ಆರೂವರೆ ವರ್ಷ ಜೈಲಿನಲ್ಲಿದ್ದ ಅವರಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.