ಬೆಳ್ತಂಗಡಿ: ತಾಲೂಕಿನ ಹಲವೆಡೆ ರವಿವಾರ ಸಂಜೆ ಭಾರೀ ಮಳೆಯಾ ಗಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿ ಅಲ್ಲಲ್ಲಿ ರಸ್ತೆ ತಡೆಯುಂಟಾದ ಘಟನೆ ನಡೆದಿದೆ.
ತಾಲೂಕಿನಾದ್ಯಂತ ಮುಂಜಾನೆ ಬಿಸಿಲಿನ ವಾತಾವರಣ ಕಂಡುಬಂದರೆ, ಮಧ್ಯಾಹ್ನ ಬಳಿಕ ನಿರಂತರ ಮಳೆಯಾಗುತ್ತಿದೆ. ರವಿವಾರ ಸಂಜೆ ಸುಮಾರು 5 ಗಂಟೆಯಿಂದ ಧರ್ಮಸ್ಥಳ, ಉಜಿರೆ, ಮುಂಡಾಜೆ ಸಹಿತ ತಾಲೂಕಿನಾದ್ಯಂತ ಹಲವಡೇ ತಾಸುಗಟ್ಟಲೆ ಭಾರೀ ಮಳೆ ಸುರಿದಿದೆ.
ಉಜಿರೆ ಕೆಳಗಿನ ಪೇಟೆ ಸಹಿತ ಅಲ್ಲಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಉಜಿರೆಯಿಂದ ಮುಂಡಾಜೆಯವರೆಗೆ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯಿಂದ ರಸ್ತೆಯಲ್ಲಿರುವ ದೊಡ್ಡ ಹೊಂಡಗಳಲ್ಲಿ ಮಳೆ ನೀರು ನಿಂತ ಪರಿಣಾಮ ದ್ವಿಚಕ್ರ ವಾಹನ ಸವಾರರರು ಪರದಾಡುತ್ತ ಸಂಚರಿಸುವ ಸ್ಥಿತಿ ನಿರ್ಮಾಣವಾಗಿತ್ತು.