ಹುಬ್ಬಳ್ಳಿ, ಅ.10: ಹಲವು ಊಹೆಗೂ ಮೀರಿದ ವಿಚಿತ್ರ, ವಿಶೇಷ ಘಟನೆಗಳು ನಡೆಯುತ್ತಿರುತ್ತದೆ. 70 ವರ್ಷದ ಶ್ರೀಮಂತ ವ್ಯಕ್ತಿಯ ಜೊತೆಗೆ 21 ರ ಯುವತಿ ಮದುವೆ, ತಂದೆಯೇ ಮಗಳನ್ನುಮದುವೆಯಾಗುವಪದ್ದತಿ ಸೇರಿದಂತೆ ಅನೇಕ ಚಿತ್ರ ವಿಚಿತ್ರ ಸನ್ನಿವೇಷಗಳು ಜರುಗುತ್ತವೆ. ಅದರಂತೆ ಇದೀಗ ‘ನನಗೆ ಡಿವೋರ್ಸ್ ಆಗಿದೆ ಎಂದು ನಂಬಿಸಿ ಮಹಿಳೆಗೆ ಮೋಸ ಮಾಡಿದ 71 ವರ್ಷದ ನಿವೃತ್ತ ನೌಕರನಿಗೆ ಧರ್ಮದೇಟು ಕೊಟ್ಟ ಘಟನೆ ಹುಬ್ಬಳ್ಳಿ(Hubli)ಯ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.
ಮಹಿಳೆಗೆ ನಂಬಿಸಿ ಹಣ ದೋಚಿದ 71 ವರ್ಷದ ನಿವೃತ್ತ ನೌಕರ
ಹೌದು, ನಾಗ್ಪುರ ಮೂಲದ ರಾಧಿಕಾ ಎಂಬ ಮಹಿಳೆಗೆ ನಂಬಿಸಿ ಮೋಸ ಮಾಡಿದ ನಿವೃತ್ತ ರೈಲ್ವೆ ನೌಕರ ರಾಮಯ್ಯ ಎಂಬಾತನಿಗೆ ಧರ್ಮದೇಟು ಕೊಡಲಾಗಿದೆ. ‘ನನಗೆ ಡಿವೋರ್ಸ್ ಆಗಿದೆ, ನಿನಗೆ ಬಾಳು ಕೊಡುತ್ತೇನೆ ಎಂದು ರಾಧಿಕಾಳಿಗೆ ನಿವೃತ್ತ ನೌಕರ ಚನಂಬಿಸಿದ್ದ. ಬಳಿಕ ಆಕೆಯಿಂದ ಹಣವನ್ನು ದೋಚಿದ್ದಾನೆ. ಹೀಗಾಗಿ ಇಂದು ನಾಗ್ಪುರದಿಂದ ಹುಬ್ಬಳ್ಳಿಗೆ ಬಂದಿದ್ದ ರಾಧಿಕಾ ಬಳಿ ಮತ್ತೆ ಹಣ ಕೇಳಿದ್ದಾನೆ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಮಹಿಳೆ ರಾಮಯ್ಯನಿಗೆ ನಡು ರಸ್ತೆಯಲ್ಲಿಯೇ ಧರ್ಮದೇಟು ನೀಡಿದ್ದಾಳೆ. ಬಳಿಕ ಆತನನ್ನು ಕರೆದುಕೊಂಡು ಹೋಗಿ ಹುಬ್ಬಳ್ಳಿ ಉಪನಗರ ಪೊಲೀಸರಿಗೆ ಒಪ್ಪಿಸಿದ್ದಾಳೆ.